


ಮಡಂತ್ಯಾರು: ಕಥೋಲಿಕ್ ಸಭಾ ಘಟಕದ ಅಭಿನಂದನಾ ಕಾರ್ಯಕ್ರಮವು ಜೂ.23ರಂದು ಕಥೋಲಿಕ್ ಸಭಾ ಘಟಕದ ಸಭೆ ನಡೆಯಿತು.
ಸೆಲೆಸ್ಟಿನ್ ಡಿ’ಸೋಜಾ ಅಧ್ಯಕ್ಷತೆ ವಹಿಸಿ, ಕಾರ್ಯದರ್ಶಿ ಮ್ಯಾಕ್ಸಿಮ್, ಕೋಶಾಧಿಕಾರಿ ನೆಲ್ಸನ್, ನಿಕಟ ಪೂರ್ವ ಅಧ್ಯಕ್ಷ ಫಿಲಿಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸದಸ್ಯರು, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರು ಜೆರಾಲ್ಡ್ ಮೊರಾಸ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ನಮ್ಮ ಘಟಕದಿಂದ 12 ಚರ್ಚ್ ಗಳನ್ನೂ ಒಳಗೊಂಡ ವಾರಾಡೊ ಅಂದರೆ ತಾಲೂಕು ಮಟ್ಟದ ಅಧ್ಯಕ್ಷರಾಗಿ ಆಯ್ಕೆಯಾದ ಲಿಯೋ ರೊಡ್ರಿಗಸ್, ಕಾರ್ಯದರ್ಶಿಯಾಗಿ ಆಯ್ಕೆಯಾದ ಫಿಲಿಪ್ ಡಿಕುನ್ಹಾ, ರಾಜಕೀಯ ಸಂಚಾಲಕರಾಗಿ ಆಯ್ಕೆಯಾದ ವಿನ್ಸೆಂಟ್ ಡಿಸೋಜಾ ಇವರನ್ನು ಗಿಡಗಳನ್ನು ನೀಡಿ ಗೌರವಯುತವಾಗಿ ಅಭಿನಂದಿಸಲಾಯಿತು.


            






