ಮಚ್ಚಿನ: ಸರಕಾರಿ ಪ್ರೌಢ ಶಾಲೆಯಲ್ಲಿ ಮಂತ್ರಿಮಂಡಲ ರಚನೆ

0

ಮಚ್ಚಿನ: ಸರಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ಆಯ್ಕೆಯನ್ನು ವಿದ್ಯುನ್ಮಾನ ಮತಯಂತ್ರದ ಆಪ್ ನಲ್ಲಿ ಸಾರ್ವತ್ರಿಕ ಚುನಾವಣೆಯ ಮಾದರಿಯಂತೆ ಮಾಡಲಾಯಿತು.

ವಿದ್ಯಾರ್ಥಿಗಳು ವಿದ್ಯನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸಿ ಸಂತೋಷ ವ್ಯಕ್ತಪಡಿಸಿದರು.ಈ ಕಾರ್ಯಕ್ರಮ ನಿರ್ವಾಹಕರು ನಮ್ಮ ಸಂಸ್ಥೆಯ ಕಲಾ ಶಿಕ್ಷಕ ವೆಂಕಪ್ಪ ಬಿ ಇವರ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕ ಮಿತ್ರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಂತ್ರಿಮಂಡಲದ ಖಾತೆಗಳು: ಮುಖ್ಯಮಂತ್ರಿಯಾಗಿ ಲಿತೀಕ್ಷಾ, ಉಪಮುಖ್ಯಮಂತ್ರಿಯಾಗಿ ಯಜ್ಞೇಶ್*, ಕ್ರೀಡಾಮಂತ್ರಿ ಯಾಗಿ ಹಿದಾಯತ್ ರಹಿಮಾನ್, ಆಯಿಷಾ ಜಸೀನಾ, ಗೃಹಮಂತ್ರಿಯಾಗಿ ಸಮೃದ್, ಲಕ್ಷ್ಮೀಶ, ಶಿಕ್ಷಣಮಂತ್ರಿಯಾಗಿ ಅಮೃತಾ, ತಸ್ರೀಫ್, ಸ್ವಚ್ಛತಾ ಮಂತ್ರಿಯಾಗಿ ಫಾತಿಮತ್ ಝನೀರಾ, ಆಸೀರಾಬಾನು.ತೋಟಗಾರಿಕಾಮಂತ್ರಿಯಾಗಿ ದಕ್ಷಿತ್ ಕುಂದರ್, ಮಹಮ್ಮದ್ ಶುರೂರ್, ವಾರ್ತಾ ಮತ್ತು ಗ್ರಂಥಾಲಯ ಮಂತ್ರಿಯಾಗಿ ಸುನೈನಾ, ಆರೋಗ್ಯ ಮಂತ್ರಿಯಾಗಿ ಅಂಕಿತ ಎಸ್.ಎ, ಅಕ್ಷತ್, ಸಾಂಸ್ಕೃತಿಕ ಮಂತ್ರಿಯಾಗಿ ಚೈತ್ರ ಆಯ್ಕೆಯಾದರು.

LEAVE A REPLY

Please enter your comment!
Please enter your name here