ಉಜಿರೆ: ಎಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆತ್ಮ ನಿರ್ಭರ ಭಾರತ ಕಾರ್ಯಕ್ರಮ

0

ಉಜಿರೆ: ಎಸ್.ಡಿ.ಯಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜೂನ್ 3ರಂದು “ಆತ್ಮ ನಿರ್ಭರ ಭಾರತ” ಎಂಬ ವಿಷಯದ ಕುರಿತು  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ರಿಜಿಸ್ಟ್ರಾರ್  ಡಾ.ರಂಗಸ್ವಾಮಿ ಅವರು  ತಾಂತ್ರಿಕ ಉಪನ್ಯಾಸ ನೀಡಿದರು.

ಡಾ.ರಂಗಸ್ವಾಮಿ ಅವರು 1947ರಿಂದ ಈ ತನಕ ಭಾರತವು ಕೃಷಿ ಹಾಗೂ ಆಹಾರಧಾನ್ಯಗಳ ಉತ್ಪಾದನೆ, ಬಾಹ್ಯಾಕಾಶ ಕ್ಷೇತ್ರ, ವಿಜ್ಞಾನ-ತಂತ್ರಜ್ಞಾನ, ನೀರಾವರಿ-ಅಣೆಕಟ್ಟು, ಸಂಪರ್ಕ-ಸಂವಹನ ಕ್ಷೇತ್ರದಲ್ಲಿ ಕಂಡುಕೊಂಡ ಕ್ಷಿಪ್ರ ಪ್ರಗತಿಯನ್ನು ವಿವರಿಸುತ್ತಾ ಭಾರತವು ಇಂದು ಆತ್ಮ ನಿರ್ಭರತೆಯೊಂದಿಗೆ ಮುನ್ನಡೆಯುತ್ತಿದ್ದು ಜಗತ್ತಿನಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಿದೆ ಎಂದರು.

ಈ ನಿಟ್ಟಿನಲ್ಲಿ ಅನನ್ಯ ಕೊಡುಗೆ ನೀಡಿದ ವಿಜ್ಞಾನಿಗಳನ್ನು, ತಂತ್ರಜ್ಞರನ್ನು, ರಾಜಕೀಯ ಮುತ್ಸದಿಗಳು,ಉದ್ಯಮಿಗಳನ್ನು ನೆನಪಿಸಿಕೊಂಡು, ಇವರುಗಳು ವಿದ್ಯಾರ್ಥಿ ಹಾಗೂ ತರುಣ ಇಂಜಿನಿಯರುಗಳಿಗೆ ಆದರ್ಶವಾಗಿರಲೆಂದು ಆಶಿಸಿದರು.

ಈ ಸಂದರ್ಭದಲ್ಲಿ  ಯಸ್ ಡಿಯಂ ಶಿಕ್ಷಣ ಸಂಸ್ಥೆಗಳ ಐಟಿ‌ಮತ್ತು ಹಾಸ್ಟೆಲ್ ನ  ಕಾರ್ಯನಿರ್ವಹಣಾಧಿಕಾರಿ ಪೂರಣ್ ವರ್ಮಾ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದೊಂದಿಗೆ ಸಮಾಜಕ್ಕೆ ಉಪಯೋಗವಾಗುವಂತಹ ಪ್ರಾಜೆಕ್ಟ್‌ಹಾಗೂ ಆಪ್‌ಗಳನ್ನು ಅಭಿವೃದ್ಧಿಗೊಳಿಸುವಂತೆ ಕರೆನೀಡಿದರು.

ಪ್ರಾಂಶುಪಾಲ ಡಾ.‌ಅಶೋಕ್ ಕುಮಾರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪ್ರಾದ್ಯಾಪಕರು ಭಾಗವಹಿಸಿದರು.

LEAVE A REPLY

Please enter your comment!
Please enter your name here