ಇಳಂತಿಲ: ಇಳಂತಿಲದ ಕಾಯರ್ಪಾಡಿಯಿಂದ ಕನ್ಯಾರಕೋಡಿವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು ಶಾಲಾ ಮಕ್ಕಳು ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ.ಹಾಗೂ ಮಳೆಗಾಲದಲ್ಲಿ ನೀರು ಹರಿದು ಹೋಗುವ ಚರಂಡಿ ವ್ಯವಸ್ಥೆಯು ಸಂಪೂರ್ಣವಾಗಿ ಮುಚ್ಚಿದ್ದು, ನೀರು ರಸ್ತೆ ಮೇಲೆ ಹರಿದು ಹೋಗುತ್ತಿದೆ.

ಇದರ ಬಗ್ಗೆ ತಾವುಗಳು ಗಮನ ಹರಿಸಿ ಆದಷ್ಟು ಬೇಗನೆ (ಮಳೆಗಾಲ ಮುಗಿಯುವ ಮುನ್ನ) ರಸ್ತೆ ಮತ್ತು ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವಂತೆ ಇಳಂತಿಲ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಅಬ್ದುಲ್ ಲತೀಷ್ ರವರು ಇಳಂತಿಲ ಗ್ರಾ.ಪಂ ಗೆ ಮನವಿ ಮಾಡಿದ್ದಾರೆ.