


ನಾರಾವಿ: ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಕನ್ನಡ ರಾಜ್ಯೋತ್ಸವ’ ಆಚರಿಸಲಾಯಿತು. ಮುಖ್ಯ ಅಧ್ಯಾಪಕ ರಿಚಾರ್ಡ್ ಮೊರಾಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿ ಕನ್ನಡ ಭಾಷಾ ಶಿಕ್ಷಕಿ ಮಾಲತಿ ‘ ಮಾತೃ ಭಾಷೆ ಕನ್ನಡವನ್ನು ಉಳಿಸುವುದು ಮಾತ್ರವಲ್ಲದೆ ಕನ್ನಡದ ಉಳಿವಿಗಾಗಿ ಶ್ರಮಿಸಬೇಕು’ ಎಂದು ಹೇಳಿದರು.


ವಿದ್ಯಾರ್ಥಿಗಳು ಕನ್ನಡ ಭಾಷೆ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ವೇದಿಕೆಯಲ್ಲಿ ಮುಖ್ಯ ಅಧ್ಯಾಪಕ ರಿಚರ್ಡ್ ಮೊರಾಸ್, ಕನ್ನಡ ಭಾಷಾ ಶಿಕ್ಷಕಿ ಮಾಲತಿ, ಕಾರ್ಯಕ್ರಮ ಆಯೋಜಕಿ ಶಿಕ್ಷಕಿ ರೆನಿಟಾ ಪಿರೇರಾ, ಶಾಲಾ ನಾಯಕ ಅಹನ್ ಜೈನ್ ಮತ್ತು ಸಿಂಚನ ಉಪಸ್ಥಿತರಿದ್ದರು.
ಹಣತೆ ಬೆಳಗಿಸುವುದರ ಮೂಲಕ ಕನ್ನಡಾಂಬೆಗೆ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳಾದ ವೆನಿಷಾ ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಮೃತ್ ಹಾಗೂ ಬಿಂದ್ಯಾ ನಿರೂಪಿಸಿದರು. ಭುವಿ ವಂದಿಸಿದರು.









