ವೇಣೂರು: ಬಜಿರೆಯ ಹೊಸಪಟ್ಣ ಸ.ಕ್ರಿ.ಪ್ರಾ. ಶಾಲೆಯ ಪರಿಸರದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಹೊಸಪಟ್ಣ ಶ್ರೀ ಸತ್ಯನಾರಾಯಣ ಪೂಜಾ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ಜಾರಿಗೆದಡಿ, ಕಾರ್ಯದರ್ಶಿ ಭಾಸ್ಕರ ಪೂಜಾರಿ ನಾಯರ್‍ಮೇರು, ಸಂಚಾಲಕ ಗಣೇಶ್ ಪೂಜಾರಿ ಹೊಸಪಟ್ಣ, ಹೊಸಪಟ್ಣ ಸತ್ಯನಾರಾಯಣ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕಿಶೋರ್ ಕುಮಾರ್ ನಾಯರ್‍ಮೇರು, ಕಾರ್ಯದರ್ಶಿ ಮೋಹನ್ ಬಿ.ಸಿ. ಹೊಸಪಟ್ಣ, ಸತ್ಯನಾರಾಯಣ ಭಜನ ಮಂಡಳಿ ಅಧ್ಯಕ್ಷ ಸತೀಶ್ ಪೂಜಾರಿ ನಾಯರ್‍ಮೇರು, ಕಾರ್ಯದರ್ಶಿ ರಂಜಿತ್ ಜಾರಿಗೆದಡಿ, ಗೌರವಾಧ್ಯಕ್ಷ ದೇಜಪ್ಪ ಮೂಲ್ಯ ಶಾಂತಿರೊಟ್ಟು, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನಾಯಕ ಸುರೇಶ್ ಪೂಜಾರಿ ಪರಾರಿ, ಶಾಲಾಭಿವೃದ್ಧಿ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಗೋಪಾಲ ಪೂಜಾರಿ ಹೊಸಪಟ್ಣ, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವಿದ್ಯಾ ಪೈ, ವೇಣೂರು ಗ್ರಾ.ಪಂ. ಸದಸ್ಯರು, ಶಿಕ್ಷಣ ಇಲಾಖೆಯ ಅನುಷ್ಠಾನಾಧಿಕಾರಿಯವರಾದ ಬಜಿರೆ ಕ್ಲಸ್ಟರ್‌ನ ಸಿ.ಆರ್.ಪಿ. ರಾಜೇಶ್, ಎಸ್‌ಡಿಎಂಸಿ ಅಧ್ಯಕ್ಷ ದಯಾನಂದ, ಉಪಾಧ್ಯಕ್ಷೆ ಶಾರದಾ, ಸ್ಥಳೀಯ ಪ್ರಮುಖರಾದ ಭಾಸ್ಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಆವರಣದಲ್ಲಿರುವ ಬೆಳೆದು ನಿಂತಿರುವ ಬೃಹದಾಕಾರಾದ ಮರಗಳನ್ನು ನೆಟ್ಟಿರುವ ದಿ|ಸುಂದರ ಪೂಜಾರಿಯವರ ಕಾರ್ಯವನ್ನು ನೆನಪಿಸಿಕೊಳ್ಳಲಾಯಿತು.