ಕಾಜೂರು ಶಿಕ್ಷಣ ಸಂಸ್ಥೆಯಲ್ಲಿ “ಅಲೀಫ್ ಡೇ” ಸಮಾರಂಭ- ವಿದ್ಯೆಯಲ್ಲಿ‌ ಸಮುದಾಯದ ಪ್ರಗತಿ ಆಶಾದಾಯಕ: ಕುಂಬೋಳ್ ತಂಙಳ್

0

ಬೆಳ್ತಂಗಡಿ: ಮುಸ್ಲಿಂ ಸಮುದಾಯ ಶೈಕ್ಷಣಿಕ ವಾಗಿ ಹಿಂದೆ ಇದ್ದ ಕಾಲವೊಂದಿತ್ತು. ಇದೀಗ ಪ್ರಗತಿ ಸಾಧಿಸುತ್ತಿದ್ದು ಕಾಜೂರು ಕೂಡ ಎಲ್ಲ ರೀತಿಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದು ಕಾಜೂರು ಆಡಳಿತ ಸಮಿತಿ ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಹೇಳಿದರು.

ರಹ್ಮಾನಿಯಾ ಎಜ್ಯುಕೇಶನ್ ಟ್ರಸ್ಟ್ ನ ಸಮೂಹ ಶಿಕ್ಷಣ ಸಂಸ್ಥೆಗಳಾದ ‘ರಾಹ ಇಂಗ್ಲೀಷ್‌ ಮೀಡಿಯಂ ಪಬ್ಲಿಕ್ ಸ್ಕೂಲ್’ , ರಹ್ಮಾನಿಯಾ ಶರೀಅತ್ ಮತ್ತು ಮಹಿಳಾ ಪಿ‌‌.ಯು ಕಾಲೇಜು, ರಹ್ಮಾನಿಯಾ ಪಳ್ಳಿದರ್ಸ್, ರಹ್ಮಾನಿಯಾ ಪ್ರೌಢ ಶಾಲೆ ಇವುಗಳ ಪ್ರಾರಂಭೋತ್ಸವ ಹಾಗೂ ಅಲೀಫ್ ಡೇ ಇದನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಜೂರು ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು ಇಬ್ರಾಹಿಂ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು.

ಪ್ರಧಾನ ಅತಿಥಿಯಾಗಿದ್ದ ವಕ್ಫ್ ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ, ಇಸ್ಲಾಂ ಧರ್ಮ ಶಿಕ್ಷಣಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ‌. ಅದನ್ನು ಕಾಜೂರಿನ ಆಡಳಿತ ಸಮಿತಿ ಯಥಾ ಪಾಲಿಸುತ್ತಿದೆ. ಇಲ್ಲಿನ ಆಡಳಿತ ಮಂಡಳಿ ಶ್ರಮಪಟ್ಟು ಸರಕಾರದ ಬೆನ್ನುಹತ್ತಿ ಅನುದಾನಗಳನ್ನು ಇಲ್ಲಿಗೆ ತಂದಿರುವುದು ಇತರ ಜಮಾಅತ್ ಗಳಿಗೆ ಮಾದರಿಯಾದ ಕಾರ್ಯ ಎಂದರು.ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಸಯ್ಯಿದ್ ಕಾಜೂರು ತಂಙಳ್ ದುಆ ನಡೆಸಿದರು. ಶಿಕ್ಷಣ ತಜ್ಞ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೊಳಿ ಶುಭಕೋರಿದರು.

ಸಮಾರಂಭದಲ್ಲಿ ಕಾಜೂರು ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ, ವಕ್ಫ್ ಜಿಲ್ಲಾ ಸಲಹಾ ಸಮಿತಿ ಸದಸ್ಯ ಜೆ‌.ಹೆಚ್ ಅಬೂಬಕ್ಕರ್ ಸಿದ್ದೀಕ್, ಕೋಶಾಧಿಕಾರಿ ಕೆ.ಎಮ್ ಕಮಾಲ್, ಉಪಾಧ್ಯಕ್ಷರುಗಳಾದ ಬದ್ರುದ್ದೀನ್ ಮತ್ತು ಅಬ್ದುಲ್ ರಹಿಮಾನ್, ಮಾಜಿ ಅಧ್ಯಕ್ಷರುಗಳಾದ ಕೆ‌.ಯು ಉಮರ್ ಸಖಾಫಿ, ಬಿ.ಎ ಯೂಸುಫ್ ಶರೀಫ್ ಮತ್ತು ಪಿ‌.ಎ ಮುಹಮ್ಮದ್, ಕಿಲ್ಲೂರು ಮಸ್ಜಿದ್ ಅಧ್ಯಕ್ಷ ಅಬ್ದುಲ್ ಅಝೀಝ್ ಝಹುರಿ, ಮಾಜಿ ಅಧ್ಯಕ್ಷ ಎಂ.ಎ ಕಾಸಿಂ ಮಲ್ಲಿಗೆಮನೆ, ಕೋಶಾಧಿಕಾರಿ ಅಬೂಬಕ್ಕರ್ ಮಲ್ಲಿಗೆ, ಗುತ್ತಿಗೆದಾರ ವಝೀರ್ ಬಂಗಾಡಿ, ಸತ್ತಾರ್ ಸಾಹೇಬ್ ಬಂಗಾಡಿ, ವಕ್ಫ್ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ, ಮುಹಮ್ಮದ್ ರಫಿ, ಸ್ಥಳೀಯ ಮೊಹಲ್ಲಾಗಳ ಅಧ್ಯಕ್ಷರುಗಳಾದ ಕೆ.ಎಂ ಅಬೂಬಕ್ಕರ್ ಕುಕ್ಕಾವು, ಉಸ್ಮಾನ್ ಪಗರೆ ಜಿ ನಗರ, ಇಸ್ಮಾಯಿಲ್ ಮುಸ್ಲಿಯಾರ್ ದಿಡುಪೆ, ಆರ್‌ಡಿ‌ಎಸ್ ಅಧ್ಯಕ್ಷ ಶರೀಫ್ ಹೈಟೆಕ್ ಇವರು ಉಪಸ್ಥಿತರಿದ್ದರು.
ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು‌‌. ಶಾಲಾ ಮುಖ್ಯೋಪಾಧ್ಯಾಯಿನಿ ಶಂಶಾದ್ ಶರೀಫ್ ಬೆರ್ಕಳ ವಂದಿಸಿದರು.

ಪ್ರತೀ ಜಮಾಅತ್ ಗಳಲ್ಲೂ ಕಮ್ಯುನಿಟಿ ಡಾಟಾ ಸಂಗ್ರಹ ಸಿದ್ದಪಡಿಸಿಟ್ಟುಕೊಂಡರೆ ಮುಂದಕ್ಕೆ ಸರಕಾರದ ಅನುದಾನ ಪಡೆಯಲು ಪೂರಕ ಲ್ರಯೋಜನವಾಗುತ್ತದೆ. ನಮ್ಮ ಜಿಲ್ಲೆಯಲ್ಲೇ ಅನೇಕ ದಾನಿಗಳಿದ್ದಾರೆ. ಆದರೆ ನಮ್ಮ ಸ್ಥಿತಿ ಗತಿ ಬಗ್ಗೆ ಸರಿಯಾದ ಡಾಟಾ ನಮ್ಮಲ್ಲಿ ಇಲ್ಲದ್ದರಿಂದ ದಾನಿಗಳು ನೀಡುವ ಪ್ರಯೋಜನ ಪಡೆದುಕೊಳ್ಳಲೂ ಅನಾನುಕೂಲವಾಗುತ್ತಿದೆ. ಇದನ್ನು ಪ್ರತೀ ಜಮಾಅತ್ ಸವಾಲಾಗಿ ತೆಗೆದುಕೊಂಡು ಜಾರಿಗೆ ಮುಂದಾಗಬೇಕು ಎಂದು ಮಂಗಳೂರು ವಕ್ಫ್ ಸಲಹಾ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ತಿಳಿಸಿದರು.

LEAVE A REPLY

Please enter your comment!
Please enter your name here