ಅಳದಂಗಡಿ: ಉಚಿತ ಯೋಗ ಶಿಬಿರದ ಉದ್ಘಾಟನೆ

0

ಅಳದಂಗಡಿ: ಆಯುಷ್ ಮಂತ್ರಾಲಯ ಭಾರತ ಸರ್ಕಾರ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀ ಧ.ಮಂ.ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಇದರ ಸಹಯೋಗದೊಂದಿಗೆ 10ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಜೂ.01ರಿಂದ ಜೂ.21ರವರೆಗೆ ಅಳದಂಗಡಿಯ ದೀಪಾ ಸಭಾಭವನದಲ್ಲಿ ಜರುಗಲಿರುವ ಉಚಿತ ಯೋಗ ಶಿಬಿರ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ಮಧುರಾ ಪದ್ಮಪ್ರಸಾದ ಅಜಿಲರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉಚಿತ ಯೋಗ ಶಿಬಿರದ ತರಬೇತುದಾರೆ ಕು|ಸುಖಿತಾ ಪಡ್ಯೋಡಿಗುತ್ತು, ಅವರ ತಂದೆ ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ತಾಯಿ ಮಮತಾ, ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ನವೀನ್ ಸಾಮಾನಿ, ಪ್ರಗತಿಪರ ಕೃಷಿಕ ಸಂತೋಷ್ ಕಾಪಿನಡ್ಕ, ಜಗದೀಶ್ ರೈ, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಸಿಇಓ ಸುರೇಶ್ ಕುಮಾರ್, ಪದ್ಮಾಂಬ ಅರೇಂಜರ್ಸ್ ಮಾಲಕ ಸುಕೇಶ್ ಜೈನ್., ಹರೀಶ್ ದೇವಾಡಿಗ, ಪ್ರಕಾಶ್ ಪೂಜಾರಿ, ಹರೀಶ್ ಶೆಟ್ಟಿ, ದೀಪಕ್ ಗೌಡ, ದಿಲೀಪ್ ಚಕ್ರವರ್ತಿ, ಗಣೇಶ್ ಕುಲಾಲ್, ಹೇಮಚಂದ್ರ ಹಾಗೂ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಸಂದೀಪ್ ಎಸ್ ನೀರಲ್ಕೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here