ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಮತ್ತು ಹರ್ಷೇಂದ್ರ ಕುಮಾರ್ ಅವರ ನಿರ್ದೇಶನದಂತೆ ಪ್ರತಿ ತಿಂಗಳು ಉಚಿತ ರೋಗ ತಪಾಸಣಾ ಶಿಬಿರದಲ್ಲಿ ನಡೆಯುತ್ತಿದ್ದು, ಮೇ 26ರಂದು ಚರ್ಮರೋಗ ತಪಾಸಣಾ ಶಿಬಿರ ನಡೆಸಲಾಯಿತು.
ಈ ಶಿಬಿರದಲ್ಲಿ ಚರ್ಮದ ಕಲೆಗಳು, ಕಪ್ಪು ಕಲೆಗಳು, ಕೂದಲು ಉದುರುವಿಕೆ ಮತ್ತು ತಲೆಹೊಟ್ಟು, ಮಕ್ಕಳ ಚರ್ಮದ ತೊಂದರೆಗಳು, ಸೌಂದರ್ಯದ ಸಮಸ್ಯೆಗಳು, ಕುಷ್ಠರೋಗ ಸಮಸ್ಯೆ, ಗಾಯದ ಗುರುತುಗಳು, ಮೊಡವೆಗಳಿಗೆ ಚಿಕಿತ್ಸೆ, ಇಸುಬು, ಡ್ರಗ್ ಅಲರ್ಜಿ, ಸೋರಿಯಾಸಿಸ್, ತೊನ್ನುರೋಗ (ಬಿಳಿ ಮಚ್ಚೆ), ತುರಿಕೆ ಖಜ್ಜಿ, ಉಗುರು ಸಂಬಂಧಿತ ರೋಗಗಳ ತಪಾಸಣೆಯನ್ನು ಉಚಿತವಾಗಿ ನಡೆಸಲಾಯಿತು.
ಚರ್ಮರೋಗ ತಜ್ಞರಾದ ಡಾ| ಭವಿಷ್ಯ ಕೆ. ಶೆಟ್ಟಿ MBBS., MD, DNB (DVL) ಶಿಬಿರ ಉದ್ಘಾಟಿಸಿ, ರೋಗಿಗಳ ತಪಾಸಣೆ ನಡೆಸಿದರು. ಶಿಬಿರದಲ್ಲಿ ರೋಗ ತಪಾಸಣೆ ಉಚಿತವಾಗಿತ್ತು. ಔಷಧದಲ್ಲಿ 10%, ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ ನೀಡಲಾಗಿತ್ತು.
ಶಿಬಿರದಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿ ಶಿಬಿರದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು.