ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೆರಿಯದ ಶ್ವೇತಾರಿಗೆ ಉಚಿತ ಕಾಮೋಡ್ ವೀಲ್ ಚೇರ್ ವಿತರಣೆ

0

ನೆರಿಯ: ನೆರಿಯ ವಲಯದ ಬಯಲು ಎಂಬಲ್ಲಿನ ಜಯಂತ್ ಶೆಣೈ ಹಾಗೂ ವಿದ್ಯಾ ರವರ 22 ವರ್ಷದ ಮಗಳು ಶ್ವೇತಾ ರವರಿಗೆ ನಡೆದಾಡಲು ಶಕ್ತಿ ಇಲ್ಲದಿರುವುದರಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ವತಿಯಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ಕಾಮೋಡ್ ವೀಲ್ ಚೇರ್ ನ್ನು ವಲಯ ಜನಜಾಗೃತಿ ಕೋಶಾಧಿಕಾರಿ ಶರೀಫ್ ಕೆ ರವರು, ವಲಯ ಅಧ್ಯಕ್ಷರಾದ ಸತೀಶ್ ಕುಕ್ಕೆಜಾಲು, ಒಕ್ಕೂಟದ ಅಧ್ಯಕ್ಷರಾದ ಸಂಧ್ಯಾರವರು ವಿತರಿಸಿದರು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ನವೀನ್ ಕುಮಾರ್, ಸೇವಾಪ್ರತಿನಿಧಿಯಾದ ಸುಮಿತ್ರಾ ರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here