



ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಅ. 26ರಂದು ವಾಣಿ ಶಿಕ್ಷಣ ಸಂಸ್ಥೆಗಳ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಸಂಘದ ಗೌರವಧ್ಯಕ್ಷರಾದ ಹೆಚ್ ಪದ್ಮ ಗೌಡ, ಕಾರ್ಯದರ್ಶಿ ಗಣೇಶ್ ಗೌಡ, ಮಾಜಿ ಅಧ್ಯಕ್ಷರಾದ ಸೋಮೇ ಗೌಡ, ಉಪಾಧ್ಯಕ್ಷರಾದ ಧರ್ನಪ್ಪ ಗೌಡ ಬಾನಡ್ಕ ಮತ್ತು ನಾರಾಯಣ ಗೌಡ ದೇವಸ್ಯ, ಜೊತೆ ಕಾರ್ಯದರ್ಶಿ ಶ್ರೀನಾಥ್ ಕೆ. ಎಂ, ಕೋಶಾಧಿಕಾರಿ ಯುವರಾಜ್ ಅನಾರ್, ನಿರ್ದೇಶಕರಾದ ಕೃಷ್ಣಪ್ಪ ಗೌಡ ಸವನಾಲು, ಡಿ.ಎಂ ಗೌಡ,ಗೋಪಾಲ ಕೃಷ್ಣ ಗುಲ್ಲೋಡಿ, ವಿಜಯ್ ಕುಮಾರ್ ನ್ಯಾಯತರ್ಪು, ಮಾಧವ ಗೌಡ, ದಿನೇಶ್ ಕೊಯ್ಯೂರು, ವಸಂತ ನಡ, ಯುವ ವೇದಿಕೆಯ ಅಧ್ಯಕ್ಷ ಚಂದ್ರ ಕಾಂತ ನಿಡ್ಡಾಜೆ ಉಪಸ್ಥಿತರಿದ್ದರು.



ಈ ಸಂಧರ್ಭದಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮಶಿಕ್ಷಕ ಪ್ರಶಸ್ತಿ ಪಡೆದ ವಿಜಯ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸಭೆಯ ನೋಟಿಸ್ ನ್ನು ವಿಜಯ ಕುಮಾರ್ ನ್ಯಾಯತರ್ಪು ಓದಿ ದಾಖಲು ಮಾಡಿದರು. ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಗಣೇಶ್ ಗೌಡ, ಲೆಕ್ಕ ಪತ್ರ ಮಂಜೂರಾತಿಯನ್ನು ಕೋಶಾಧಿಕಾರಿ ಯುವರಾಜ್ ಅನಾರು ಮಂಡಿಸಿದರು. ಈ ಸಂಧರ್ಭದಲ್ಲಿ ಸಂಘದ ಗೌರವಧ್ಯಕ್ಷ ಹೆಚ್ ಪದ್ಮ ಗೌಡ ಮಂದಿನ ವರ್ಷದ ಅಭಿವೃದ್ಧಿ ವಿಷಯಗಳ ಬಗ್ಗೆ ಸದಸ್ಯರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಮಾರಿ ಹಂಸಿನಿ, ಮತ್ತು ಕುಮಾರಿ ಶ್ರೇಯಾ ಪ್ರಾರ್ಥಿಸಿದರು. ನಿರ್ದೇಶಕ ಗೋಪಾಲ ಕೃಷ್ಣ ಗುಲ್ಲೋಡಿ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಶ್ರೀನಾಥ ಕೆ ಎಂ ಕಾರ್ಯಕ್ರಮ ನಿರೂಪಿಸಿ ದಿನೇಶ್ ಕೊಯ್ಯೂರು ಧನ್ಯವಾದವಿತ್ತರು.










