


ಬೆಳ್ತಂಗಡಿ: ಮುಂಡಾಜೆ ಗ್ರಾಮದ ಸೋಮಂತಡ್ಕ ಪೇಟೆಯಲ್ಲಿ ವೇಗನಾರ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದದ್ದೂ ಮಾತ್ರವಲ್ಲದೆ ಪಕ್ಕದ ಕಟ್ಟಡದ ಶೆಡ್ಡಿನ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿಯಾಗಿದೆ.
ಕಾರಿನಲ್ಲಿ ಮೂರು ಮಂದಿ ಇದ್ದು ಮೂರು ಮಂದಿಗೂ ಗಾಯವಾಗಿದೆ. ಈ ಪೈಕಿ ಇಬ್ಬರಿಗೆ ಹೆಚ್ಚಿನ ಗಾಯವಾಗಿದೆ.



ಹೈವೇ ಪೆಟ್ರೋಲ್ ಕರ್ತವ್ಯದಲ್ಲಿದ್ದು ಅಪಘಾತದ ನಡೆದ ಸ್ಥಳದಲ್ಲೇ ಇದ್ದ ಎಎಸ್‌ಐ ದುರ್ಗಾದಾಸ್, ಹೆಡ್ ಕಾನ್ಸ್‌ಟೇಬಲ್ ಲಕ್ಷ್ಮಣ ಲಮಾಣಿ ಅವರು ಗಾಯಾಳುಗಳನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಾಯಾಳುಗಳ ಗುರುತು ಪತ್ತೆಯಾಗಿರುವುದಿಲ್ಲ.
ಆದ್ದರಿಂದ ವಿವರ ತಿಳಿಯಬೇಕಿದೆ.ಕಾರಿನಲ್ಲಿದ್ದವರು ಎಲ್ಲಿಗೆ ತೆರಳಿದ್ದರುಎಂದು ತಿಳಿದುಬಂದಿಲ್ಲ. ಕಾರಿನೊಳಗಡೆ ಮದುವೆ ವೇದಿಕೆ ಅಲಂಕಾರ ಮಾಡುವ ಸಾಧನಗಳು ಮತ್ತು ಲೈಟಿಂಗ್ ಉಪಕರಣಗಳು ಇದೆ.


            






