ನೀರಿಲ್ಲದ ಬಾವಿಗೆ ಬಿದ್ದ ನಾಗರಹಾವಿನ ರಕ್ಷಣೆ

0

ತೋಟತ್ತಾಡಿ: ನೀರಿಲ್ಲದೆ ಸಂಪೂರ್ಣ ಆರಿದ್ದ ಸುಮಾರು 40 ಅಡಿ ಆಳದ ಬಾವಿಗೆ ಬಿದ್ದ ನಾಗರಹಾವನ್ನು ಹಿಡಿದು, ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟತ್ತಾಡಿ ಗ್ರಾಮದ ಬರಮೇಲು ಲೋಕಯ್ಯ ಪೂಜಾರಿ ಎಂಬವರ ಮನೆ ಬಾವಿ ಬಳಿ ಮೇ.5ರಂದು ಮಧ್ಯಾಹ್ನದ ಹೊತ್ತು ಸುತ್ತಾಡುತ್ತಿದ್ದ ನಾಗರಹಾವು ಆಳವಾದ ನೀರಿಲ್ಲದ ಬಾವಿಗೆ ಬಿದ್ದಿದೆ.

ಇದನ್ನು ಗಮನಿಸಿದ ಮನೆಯವರು ಉರಗಮಿತ್ರ ಕಕ್ಕಿಂಜೆಯ ಸ್ನೇಕ್ ಅನಿಲ್ ಅವರಿಗೆ ಮಾಹಿತಿ ನೀಡಿದರು.

ತಕ್ಷಣ ಆಗಮಿಸಿದ ಅವರು, ಬಾವಿಗೆ ಇಳಿದು ನಾಗರಹವನ್ನು ರಕ್ಷಿಸಿ ಮೇಲೆತ್ತಿದರು.

ಇಲ್ಲಿ ಸೇರಿದಂತೆ ಚಾರ್ಮಾಡಿ ಹಾಗೂ ನೆರಿಯದ ಬಸ್ತಿಯಲ್ಲೂ ನಾಗರಹಾವುಗಳು ಕಂಡುಬಂದಿದ್ದು,ಒಟ್ಟು ಮೂರು ನಾಗರಹಾವುಗಳನ್ನು ಹಿಡಿದು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

p>

LEAVE A REPLY

Please enter your comment!
Please enter your name here