ಉಜಿರೆ: ಕಳೆದ 36 ವರ್ಷಗಳಿಂದ ಉಜಿರೆಯ ಎಸ್ ಡಿಎಂ ಕಾಲೇಜಿನಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಎಸ್ ಡಿಎಯಾಗಿ ವಯೋನಿವೃತ್ತಿ ಹೊಂದಿದ ಸದಾನಂದ ಬಿ.ಮುಂಡಾಜೆ ಅವರಿಗೆ ಕಾಲೇಜಿನಲ್ಲಿ ‘ಸದಾನಂದಾಭಿನಂದನೆ’ ಬೀಳ್ಕೊಡುಗೆ ಕಾರ್ಯಕ್ರಮ ಜರಗಿತು.
ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಮಾತನಾಡಿ “ತನ್ನ ವೃತ್ತಿಯ ಜತೆ ಸದಾನಂದ ಬಿ.ಯವರು ಕಲೆ,ಸಾಹಿತ್ಯ,ಸಂಸ್ಕೃತಿಯನ್ನು ಬೆಳೆಸಲು ಶ್ರಮ ಪಟ್ಟವರು.ಉತ್ತಮ ಬರವಣಿಗೆಯ ಮೂಲಕ ಗುರುತಿಸಲ್ಪಟ್ಟಿದ್ದ ಅವರು, ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಛಾತಿ ಹೊಂದಿದ್ದರು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿನ್ಸಿಪಾಲ್ ಡಾ.ಬಿ.ಎ.ಕುಮಾರ್ ಹೆಗ್ಡೆ ಮಾತನಾಡಿ “ಸೇವೆ ನೀಡುವ ಸಮಯ ಪ್ರತಿಯೊಬ್ಬರೂ ಗಳಿಸುವ ಅನುಭವ ಮುಂದಿನ ಜೀವನಕ್ಕೆ ಸಹಕಾರಿ.ಪ್ರಾಮಾಣಿಕ ಸಿಬ್ಬಂದಿ ಸದಾನಂದ ಬಿ. ಅವರದು ಪ್ರತಿಭಾಶಾಲಿ ವ್ಯಕ್ತಿತ್ವ. ಅವರ ಕಾರ್ಯದಕ್ಷತೆ ಇತರರಿಗೆ ಮಾದರಿ, ಅವರು ಕ್ರೀಡಾ ಕ್ಷೇತ್ರದಲ್ಲೂ ಹೆಚ್ಚಿನ ಅನುಭವಿ” ಎಂದು ಹೇಳಿದರು.
ವೈಸ್ ಪ್ರಿನ್ಸಿಪಾಲ್ ಪ್ರೊ.ಎಸ್.ಎನ್.ಕಾಕತ್ಕರ್, ಪಿಜಿ ವಿಭಾಗದ ಡೀನ್ ಡಾ.ವಿಶ್ವನಾಥ, ರಿಜಿಸ್ಟ್ರಾರ್ ಶಲೀಫ್ ಕುಮಾರಿ, ಕಚೇರಿ ಮುಖ್ಯಸ್ಥರಾದ ದಿವಾಕರ ಪಟವರ್ಧನ್ ಮತ್ತು ರಾಜಪ್ಪ, ಕಾರ್ಯಕ್ರಮ ಸಂಯೋಜಕಿ ಅಮಿತಾ ಕುಮಾರಿ ಮತ್ತಿತರರು ಉಪಸ್ಥಿತರಿದ್ದರು.
ಗ್ರಂಥಾಲಯ ವಿಭಾಗದ ಸಿಬ್ಬಂದಿ ತುಕಾರಾಂ ಸ್ವಾಗತಿಸಿದರು. ಪರಮೇಶ್ವರ ವಂದಿಸಿದರು.ಭವ್ಯಶ್ರೀ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕೇತರ ಸಿಬ್ಬಂದಿ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.