ದರ್ಬೆತಡ್ಕ: ವೇದ ಕುಸುಮ ಶಿಬಿರ ಉದ್ಘಾಟನೆ

0

ಕೊಕ್ಕಡ: ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘ ಅರಸಿನಮಕ್ಕಿ ಇದರ ವಾಷಿ೯ಕೋತ್ಸವವು ಮೇ.2ರಂದು ಶ್ರೀಕಾಲಕಾಮ ಪರಶುರಾಮ ದೇವಸ್ಥಾನದ ಚಿತ್ಪಾವನ ಸಭಾ ಭವನ ದರ್ಬೆತಡ್ಕದಲ್ಲಿ ನಡೆಯಿತು.

ಪರಶುರಾಮ ದೇವರಿಗೆ ಪವಮಾನ ಅಭಿಷೇಕ, ಗಣಹೋಮ, ಸಮಾಜದ ವಟುಗಳಿಗೆ ಬ್ರಹ್ಮೋಪದೇಶ ನೀಡುವ ಕಾಯ೯ಕ್ರಮ ಜರಗಿತು.

ಬಳಿಕ ಸಂಘದ ಮಹಾಸಭೆ ಜರಗಿತು, ನೂತನ ಅಧ್ಯಕ್ಷರಾಗಿ ಶ್ರೀವರದ ಶಂಕರ ದಾಮಲೆ, ಕಾರ್ಯದಶಿ೯ಯಾಗಿ ವೆಂಕಟೇಶ ದಾಮಲೆ ಆಯ್ಕೆಯಾದರು.

ಮೇ.3ರಂದು ವೇದ ಕುಸುಮ ಶಿಬಿರವನ್ನು ಗೋಪಾಲ ಮರಾಠೆ ಫೋಕ೯ಳ, ವತ್ಸಲಾ ಅವರು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು.ಶಿಬಿರದಲ್ಲಿ ಸಮಾಜದ ವಟುಗಳಿಗೆ ಸಂಧ್ಯಾವಂದನೆ, ಅಥವ೯ಶೀಷ೯, ಪುರುಷ ಸೂಕ್ತ, ಪುಷ್ಪಾಂಜಲಿಗಳನ್ನು ಹತ್ತು ದಿನಗಳ ಕಾಲದವರೆಗೆ ಗುರುಕುಲ ಮಾದರಿಯಲ್ಲಿ ಕಲಿಸಲಾಗುವುದು.

ಗುರುಗಳಾಗಿ ಗೋಪಾಲ ಮರಾಠೆಯವರು ಸೇವೆ ಸಲ್ಲಿಸುತ್ತಾರೆ, ಪ್ರಾಸ್ತಾವಿಕವಾಗಿ ಶಿಬಿರಾಥಿ೯ಗಳಿಗೆ ಯೋಗೀಶ ದಾಮಲೆಯವರು ಮಾತನಾಡಿದರು ಶಿಬಿರವು ಮೇ.12ರ ವರೆಗೆ ಶಿಬಿರವು ನಡೆಯಲಿದೆ.

ಹಲವು ವರ್ಷಗಳಿಂದ ನಿರಂತರವಾಗಿ ವೇದ ಕುಸುಮ ಶಿಬಿರವು ಚಿತ್ಪಾವನ ಸಭಾ ಭವನದಲ್ಲಿ ಮೇ ತಿಂಗಳಲ್ಲಿ ನಡೆಯುತ್ತಾ ಬಂದಿದೆ.ಈ ಶಿಬಿರದಲ್ಲಿ ಸಮಾಜದ ಹಲವು ವಟುಗಳು ನಿತ್ಯಾಹ್ನಿಕ, ಸಂಧ್ಯಾವಂದನೆ ಮತ್ತು ಪೂಜಾ ವಿಧಿಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಾಥ೯ಕತೆಯನ್ನು ಪಡೆದಿರುವುದು ಹೆಮ್ಮೆಯ ವಿಷಯ ಎಂದು ವೇದ ಕುಸುಮ ಶಿಬಿರದ ಪ್ರಾರಂಭಿಕ ನಿದೇ೯ಶಕ ಯೋಗೀಶ ದಾಮಲೆ ತಿಳಿಸಿದರು.

LEAVE A REPLY

Please enter your comment!
Please enter your name here