ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿಐ ಮಂಜುಶ್ರೀ ವತಿಯಿಂದ ಶುಶ್ರುಷ ಕಾರ್ಯಕ್ರಮ

0

ಬೆಳ್ತಂಗಡಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಜೆಸಿಐ ಬೆಳ್ತಂಗಡಿ ಮಂಜುಶ್ರೀಯು “ಶುಶ್ರುಷ” ಎಂಬ ಕಾರ್ಯಕ್ರಮವನ್ನು ಬೀಟ್ ರಾಕರ್ಸ್ ಡಾನ್ಸ್ ಆಕಾಡೆಮಿಯ ಮಾಲಕ ಜೆಸಿ ಜಿತೇಶ್ ಇವರ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.

ಸಾಮಾನ್ಯ ಕಾಯಿಲೆಗಳಿಗೆ ಮನೆಮದ್ದುಗಳು, ಹಾಗೂ ದೈಹಿಕ ಮಾನಸಿಕ ಆರೋಗ್ಯವನ್ನು ಕಾಪಾಡುವ ಬಗ್ಗೆ ವಲಯ ತರಬೇತಿದಾರರು ಹಾಗೂ ಬೆಳ್ತಂಗಡಿಯ ಶುಶ್ರುಷನಾಧಿಕಾರಿ ಆಗಿರುವ ಜೆಸಿ ಶುಭಾಷಿಣಿ ಇವರು ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಜೆಸಿ ಘಟಕದ ಅಧ್ಯಕ್ಷ ರಂಜಿತ್ ಎಚ್ ಡಿ ಬಳಂಜ ವಹಿಸಿದರು.

ವೇದಿಕೆಯಲ್ಲಿ ಜೆಸಿ ಜಿತೇಶ್ ಇವರ ಮಾತೃಶ್ರೀ ರೇವತಿ ಇವರು ಅತಿಥಿಯಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇದಿಕೆ ಆಹ್ವಾನವನ್ನು ಜೂನಿಯರ್ ಜೆ ಸಿ ಘಟಕದ ನಿರ್ದೇಶಕರಾಗಿರುವ ರಕ್ಷಿತಾ ಶೆಟ್ಟಿ ಹಾಗೂ ಜೆಸಿ ವಾಣಿಯವರನ್ನು ಜೆಸಿ ಸ್ವಾತಿ ಪ್ರೀತೇಶ್ ಉದ್ಘೋಷಿಸಿದರು.

ಕಾರ್ಯಕ್ರಮದಲ್ಲಿ ಜೆಸಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿದರು ಮೂಲಕ ಕುಟುಂಬೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಜೂನಿಯರ್ ಜೆಸಿಬಿ ವಿಭಾಗದ ನಿರ್ದೇಶಕರಾದ ಸಚಿನ್ ಸಾಲಿಯಾನ್ ಗೇರುಕಟ್ಟೆ ಇವರು ನಡೆಸಿಕೊಟ್ಟರು.

ಮಂಜುಶ್ರೀ ಜೆಸಿಐ ಘಟಕದ ಪರವಾಗಿ ಕುಟುಂಬೋತ್ಸವವನ್ನು ಆಯೋಜಿಸಿದ ಜಿತೇಶ್ ಇವರ ಮಾತೃಶ್ರೀ ಅವರನ್ನು ಗೌರವಿಸಲಾಯಿತು.ಕಾರ್ಯದರ್ಶಿ ಅನುದೀಪ್ ಜೈನ್ ಇವರು ಧನ್ಯವಾದ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಶಂಕರ್ ರಾವ್, ಮಹಿಳಾ ಜೆಸಿ ಸಂಯೋಜಕರಾದ ಶ್ರುತಿ ರಂಜಿತ್, ಜೆಜಿಸಿ ಘಟಕದ ಅಧ್ಯಕ್ಷರಾದ ಸಮನ್ವತ್ ಕುಮಾರ್, ಘಟಕದ ಪೂರ್ವ ಅಧ್ಯಕ್ಷರು, ಮಹಿಳಾ ಜೆಸಿಯ ಪೂರ್ವ ಅಧ್ಯಕ್ಷರುಗಳು, ಘಟಕದ ಪದಾಧಿಕಾರಿಗಳು ಸದಸ್ಯರುಗಳು ಹಾಗೂ ಜೆಜೆಸಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

p>

LEAVE A REPLY

Please enter your comment!
Please enter your name here