

ಕಳೆಂಜ: ಉಮಾಮಹೇಶ್ವರ ದೇವಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಹೃದಯಾಘಾತಕ್ಕೋಳಗಾಗಿ ದೈವದೀನರಾದ ಪುತ್ಯೆ ಮೋಹನ ಗೌಡರ ಶ್ರದ್ಧಾಂಜಲಿ ಸಭೆ ಮಾ.17ರಂದು ಶಿವಪಾರ್ವತಿ ಸಭಾಭವನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ ಕಳೆಂಜ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಶಿಶಿಲ ಶಿಬಾಜೆ ಅರಸಿನಮಕ್ಕಿ ಕೊಕ್ಕಡ ಹಾಗೂ ಇನ್ನಿತರ ಭಾಗದಲ್ಲಿ ಕಾಲ್ನಡಿಗೆಯ ಮೂಲಕ ನಡೆದು ಸಂಘವನ್ನು ಕಟ್ಟಿ ಬೆಳೆಸಿದ ಅವರ ಕಾರ್ಯ ಮೆಚ್ಚುವಂತಹದು.
ಅವರ ಸಾವು ಸಂಘಕ್ಕೆ ತುಂಬಲಾರದ ನಷ್ಟ ಎಂದು ಹೇಳಿ ಭಾವುಕರಾದರು.ಈ ಸಂದರ್ಭದಲ್ಲಿ ಸ್ಥಳೀಯರಾದ ಆನಂದ ಗೌಡ, ಜನಾರ್ಧನ ಗೌಡ ಕಜೆ, ಪ್ರಸನ್ನ ಎ ಪಿ, ಡೀಕಯ್ಯ ಗೌಡ ಕುಲಾಡಿ, ಮಂಜುನಾಥ ಕುಲಾಡಿ, ಧನಂಜಯ ಗೌಡ ಶಿಬರಾಜೆ ದಿ.ಮೋಹನ ಗೌಡರ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಪ್ರಮುಖರಾದ ವಿನಯ ಚಂದ್ರ ಕೊಳಂಬೆ, ಉಮಾಮಹೇಶ್ವರ ದೇವಳದ ಅಧ್ಯಕ್ಷ ಆನಂದ ಗೌಡ, ಶಾಸಕ ಹರೀಶ್ ಪೂಂಜಾ, ಸಂಘದ ಹಿರಿಯರು, ದಿ.ಮೋಹನಗೌಡರ ಧರ್ಮ ಪತ್ನಿ ಸೀತಮ್ಮ ಮತ್ತು ಮಕ್ಕಳು, ದೇವಳದ ಟ್ರಸ್ಟ್ ಅಧ್ಯಕ್ಷರಾದ ಬಾಲಕೃಷ್ಣ ಗೌಡ ಕೈರೋಡಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಸ್ವಾಗತವನ್ನು ಜನಾರ್ಧನ ಗೌಡ ಕಜೆ ನೆರವೇರಿಸಿದರು.