

ಮಡಂತ್ಯಾರು: ಪಾರೆಂಕಿ ಗ್ರಾಮದ ಶ್ರೀರಾಮ ನಗರ ಹಾರಬೆ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಮಾ.14ರಂದು ಮಂಜುನಾಥ ಭಟ್ ಅಸ್ರಣ್ಣರು ಮಾಲಾಡಿ ಅಂತರ ಉಪಸ್ಥಿತಿಯಲ್ಲಿ ಜರಗಿತು.
ಬೆಳಿಗ್ಗೆ ಗಣಹೋಮ, ನಾಗ ದೇವರೀಗೆ ತಂಬಿಲ ಸೇವೆ, ಸಾಯಂಕಾಲ ಸತ್ಯನಾರಾಯಣ ಪೂಜೆ, ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರಿಂದ ಭಜನಾ ಕಾರ್ಯಕ್ರಮ, ಮಹಾ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ನಂತರ ನೇಮೋತ್ಸವ ಜರಗಿತು.
ನೇಮೋತ್ಸವ ಸಮಿತಿ ಅಧ್ಯಕ್ಷರು ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.