ಇಖ್ರ ಇಂಟರ್‌ ನ್ಯಾಶನಲ್ ಸ್ಕೂಲ್ ಪ್ರಾರಂಭೋತ್ಸವ

0

ಬೆಳ್ತಂಗಡಿ: ಇಖ್ರ ಇಂಟರ್ನ್ಯಾಷನಲ್ ಸ್ಕೂಲ್ ಇಂದು ಗುಣಮಟ್ಟದ ಶಿಕ್ಷಣ ಮತ್ತು ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಮೈಲಿಗಲ್ಲು ಸಾಧಿಸಿದೆ. ದೇಶದಾದ್ಯಂತ ಶಾಖೆಗಳನ್ನು ಹೊಂದಿದ್ದು ವ್ಯವಸ್ಥಿತ ಕ್ಯಾಂಪಸ್, ಕಲಿಕಾ ಪೂರಕ ಚಟುವಟಿಕೆಗಳು, ವಿದ್ಯಾರ್ಥಿಗಳ ಸೃಜನಾತ್ಮಕ ಏಳಿಗೆಗೆ ಪೂರಕ ಪಠ್ಯ ಮತ್ತು ಪಠ್ಯೇತರ ನಿಯಮಾವಳಿಗಳನ್ನು ಅನುಷ್ಠಾನಿಸುತ್ತಿದೆ ಎಂದು ಇಖ್ರ ಇಂಟರ್ನ್ಯಾಷನಲ್ ಸ್ಕೂಲ್ ಇದರ ಮುಂಬೈ ಕೇಂದ್ರದ ಪ್ರಮುಖರಾದ ಖಾಲಿದ್ ಹೇಳಿದರು.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್‌ಕೆರೆ ಎಂಬಲ್ಲಿ ಈ ಶೈಕ್ಷಣಿಕ ಅವಧಿಯಿಂದ ಆರಂಭವಾಗಲಿರುವ ಇಖ್ರ ಇಂಟರ್‌ ನ್ಯಾಶನಲ್ ಸ್ಕೂಲ್ – ಇದರ ಪ್ರಾರಂಭೋತ್ಸವವು ಮಾ.10ರಂದು ಬೆಳ್ತಂಗಡಿ ಮುಖ್ಯ ರಸ್ತೆಯಲ್ಲಿರುವ ಏಕತಾ ಸೌಧ ಸಭಾ ಭವನ (ಎನ್.ಜಿ.ಓ ಹಾಲ್)ನಲ್ಲಿ ನಡೆಯಿತು.

ಸದ್ರಿ ಸಮಾರಂಭದಲ್ಲಿ ಇಖ್ರ ಇಂಟ‌ರ್ ನ್ಯಾಶನಲ್ ಸ್ಕೂಲ್ ಪುತ್ತೂರು ಇಲ್ಲಿನ ಮುಖ್ಯ ಸಂಚಾಲಕ ಮುಹಮ್ಮದ್ ಶರೀಫ್ ಇವರು ಭಾಗವಹಿಸಿದ್ದರು.ಅಲ್ಲದೆ ಪುತ್ತೂರಿನ ವಿದ್ಯಾರ್ಥಿಗಳು ತಮ್ಮ ಪ್ರತಿಭಾ ಪ್ರದರ್ಶನವನ್ನು ನಡೆಸಿಕೊಟ್ಟಿದ್ದು ಸಮಾರಂಭದ ವಿಶೇಷ ಆಕರ್ಷಣೆಯಾಗಿತ್ತು.

ಖಾಲಿದ್ ಮುಂಬೈ ಅವರ ಪತ್ನಿ ಮತ್ತು ದಕ್ಷಿಣ ಭಾಗದ ಪ್ರಾದೇಶಿಕ ಅಕಾಡೆಮಿಕ್ ಮುಖ್ಯಸ್ಥೆ ಉಪಸ್ಥಿತರಿದ್ದು, ಇಖ್ರ ಶಾಲೆಯ ಹಲವು ಉಪಯುಕ್ತ ಮಾಹಿತಿಗಳನ್ನು ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಅಹ್ಮದುಲ್ ಕಬೀರ್ ಕಾಜೂರು ಇವರು ಸಾಂದರ್ಭಿಕವಾಗಿ ಮಾತನಾಡುತ್ತಾ, ಸದ್ರಿ ಶಾಲೆಯು ಲೌಕಿಕ ವಿದ್ಯಾಭ್ಯಾಸದೊಂದಿಗೆ ಪುಟ್ಟ ಮಕ್ಕಳಿಗೆ ಇಸ್ಲಾಮಿನ ಮೂಲಭೂತ ವಿಷಯಗಳ ಬಗ್ಗೆ ಕಲಿಸಿ, ಮಕ್ಕಳಲ್ಲಿ ಬಾಲ್ಯದಿಂದಲೇ ಇಸ್ಲಾಮೀ ಸಂಸ್ಕಾರವನ್ನು ಕಲಿಸುವ ಉತ್ತಮ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಇದು ಮಕ್ಕಳ ಮುಂದಿನ ಜೀವನಕ್ಕೆ ತುಂಬಾ ಸಹಕಾರಿಯಾಗಿರುತ್ತದೆ. ಆದುದರಿಂದ ಈ ಶಾಲೆಯ ಬಗ್ಗೆ ಮಾಹಿತಿ ಇಲ್ಲದವರಿಗೆ ಇಲ್ಲಿ ಹಾಜರಿದ್ದವರು ಸೂಕ್ತ ಮಾಹಿತಿಯನ್ನು ನೀಡಿ ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪ್ರೇರೇಪಿಸಬೇಕಾಗಿದೆ ಎಂದರು.

ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವಲ್ಲಿ ಜನಾಬ್ ಫಾರೂಕ್ ಪುತ್ರಬೈಲು ಹಾಗೂ ಶಾಲಾ ಕಟ್ಟಡದ ಮಾಲಕ ಶಾಹುಲ್ ಹಮೀದ್ ಕಟ್ಟೆ ಇವರು ಪೂರ್ಣ ಮಟ್ಟದ ಸಹಕಾರವನ್ನು ನೀಡಿದರು.ದಾಖಲಾತಿ ಹಾಗೂ ಇತರ ವಿವರಗಳಿಗಾಗಿ 9449555696 ಈ ಮೊಬೈಲ್ ನಂಬರನ್ನು ಸಂಪರ್ಕಿಸಬಹುದೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here