ಬೆಳ್ತಂಗಡಿ: ಗೌಡರ ಯಾನೆ ಒಕ್ಕಲಿಗ ಸೇವಾ ಸಂಘ ಮತ್ತು ಯುವ ವೇದಿಕೆ ಇದರ ಸಹಭಾಗಿತ್ವದಲ್ಲಿ ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

0

ಬೆಳ್ತಂಗಡಿ: ಗೌಡರ ಯಾನೆ ಒಕ್ಕಳಿಗ ಸೇವಾ ಸಂಘ ಹಳೆಕೋಟೆ ಬೆಳ್ತಂಗಡಿ ಮತ್ತು ಯುವ ವೇದಿಕೆ ಬೆಳ್ತಂಗಡಿ ಇದರ ಸಹಭಾಗಿತ್ವದಲ್ಲಿ ತಾಲೂಕು ಮಹಿಳಾ ವೇದಿಕೆ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ.10ರಂದು ವಾಣಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

ಉದ್ಘಾಟನೆಯನ್ನು ಸ.ಹಿ.ಪ್ರಾ.ಶಾಲೆ ಗುರುವಾಯನಕೆರೆ ಇಲ್ಲಿನ ಮುಖ್ಯೋಪಾಧ್ಯಾಯಿನಿ ಉಮಾ.ಡಿ.ಗೌಡ ನೇರವೇರಿಸಿದರು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕು ಮಹಿಳಾ ವೇದಿಕೆಯ ಅಧ್ಯಕ್ಷರಾದ ಗೀತಾ ರಾಮಣ್ಣ ಗೌಡ ವಹಿಸಿಕೊಂಡರು.ಮುಖ್ಯ ಅತಿಥಿಗಳಾಗಿ ಗೌಡರ ಯಾನೆ ಒಕ್ಕಳಿಗ ಸೇವಾ ಸಂಘದ ನಿರ್ದೇಶಕಿ ಉಷಾ ವೆಂಕಟರಮಣ ಗೌಡ, ಬೆಳ್ತಂಗಡಿ ತಾಲೂಕು ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಸಂಪನ್ಮೂಲ ವ್ಯಕ್ತಿಯಾಗಿ ಸುಳ್ಯ ನೆಹರು ಸ್ಮಾರಕ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಅನುರಾಧ ಕುರುಂಜಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಭಾರತ ಸೌಟ್ಸ್&ಗೈಡ್ಸ್(ಬುಲ್ ಬುಲ್) ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮುಂಡಾಜೆ ದಿನೇಶ್ ಮತ್ತು ಉಷಾ ದಂಪತಿ ಪುತ್ರಿ ಬೇಬಿ ದ್ವಿಶಾ ಯು.ಡಿ ಇವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಮಹಿಳಾ ವೇದಿಕೆಯ ಗೌರವಾಧ್ಯಕ್ಷ ರಾದ ಶುಭಾಷಿಣೆ ಜನಾರ್ದನ ಗೌಡ, ತಾಲೂಕು ಮಹಿಳಾ ವೇದಿಕೆಯ ಕಾರ್ಯ ದರ್ಶಿ ಲೀಲಾ,ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಗೌಡರ ಯಾನೆ ಒಕ್ಕಳಿಗ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ಗೌಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here