


ಶಿರ್ಲಾಲು: ತುಳುನಾಡಿನ ಸಂಸ್ಕತಿ, ಸಂಸ್ಕಾರ ಮತ್ತು ಕ್ರೀಡಿಗಳನ್ನು ಉಳಿಸಿ ಬೆಳೆಸುವ ಅಗತ್ಯವಿದ್ದು ಇಂದು ಶಿರ್ಲಾಲು ಕುಲಾಲ ಸಮಾಜ ಬಾಂದವರು ಕೆಸರುಡೊಂಜಿ ಕ್ರೀಡಾಕೂಟ ಮಾಡುತ್ತಿರುವುದು ಅಬಿನಂದನೀಯ. ಕುಲಾಲ ಸಮುದಾಯ ಹಿಂದಿನಿಂದಲೂ ದೈವ ದೇವರ ಸೇವೆಯಲ್ಲಿ ತೊಡಗಿಸಿಕೊಂಡ ಸಮುದಾಯವಾಗಿದೆ ಎಂದು ಧಾರ್ಮಿಕ ಮುಖಂಡ ಕಿರಣ್ ಪುಷ್ಪಗಿರಿ ಹೇಳಿದರು.


ಅವರು ಶಿರ್ಲಾಲಿನಲ್ಲಿ ಮೂಲ್ಯರ ಯಾನೆ ಕುಲಾಲರ ಸಂಘ ರಿ ಅಯೋಜಿಸಿದ ಕೆಸರುಡೊಂಜಿ ದಿನ ಕಾರ್ಯಕ್ರಮದಲ್ಲಿ ಮುಖ್ಯ ಆಥಿತಿಯಾಗಿ ಭಾಗವಹಿಸಿ ಮಾತನಾಡಿ ಇಂತಹ ಕ್ರೀಡಾ ಕೂಟಗಳು ನಗರ ಪ್ರದೇದಲ್ಲೂ ವಿಸ್ತರಿಸಬೇಕು ಆಗ ನಗರವಾಸಿಗಳಿಗೂ ತುಳುನಾಡ ಕ್ರೀಡೆಯ ಪರಿಚಯವಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದ ಕೆಸರುಡೊಂಜಿ ದಿನ ಕ್ರೀಡಾಕೂಟ ನಡೆಸಬೇಕು ಎಂದರು. ಉದ್ಯಮಿ ಗಣೇಶ್ ಕುಲಾಲ್ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿ ಸಮಾಜಬಾಂದವರು ಒಟ್ಟಾಗಿ ಸೇರಲು ಇಂತಹ ಕ್ರೀಡಾ ಕೂಟ ಅಗತ್ಯ ಎಂದರು.
ಮೂಲ್ಯರ ಯಾನೆ ಕುಲಾಲ ಸಂಘ ಅಳದಂಗಡಿ, ಶಿರ್ಲಾಲ್ ಇದರ ಅದ್ಯಕ್ಷ ಪ್ರಭಾಕರ ಕುಲಾಲ್ ಅದ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಳದಂಗಡಿ ಸಿ ಎ ಬ್ಯಾಂಕ್ ನ ಸತೀಶ್ ಕುಲಾಲ್, ಪ್ರಗತಿಪರ ಕ್ರುಷಿಕ ಮೋಂಟ ಮೂಲ್ಯ, ಶಿರ್ಲಾಲ್ ಕುಲಾಲ್ ಸಂಘದ ಮಾಜಿ ಅಧ್ಯಕ್ಷ ಬಾಲಕೃಷ್ಣ ನೂಜಿಗೆ, ಪ್ರಗತಿಪರ ಕೃಷಿಕ ರಾಮ ಬಂಗೇರ ಕಾಯರೊಟ್ಟು, ಉಪನ್ಯಾಸಕ ಅವಿನಾಶ್ ಕುಲಾಲ್ ಮಾಣಿಲ, ಶಿರ್ಲಾಲು ಸಿಎ ಬ್ಯಾಂಕ್ ನ ಲೆಕ್ಕಿಗ ರಾಜೇಶ್ ಎನ್. ನೂಜಿಗ, ಉದ್ಯಮಿಗಳಾದ ಬೇಬಿ ಮೂಲ್ಯ ಬೈರೊಟ್ಟು, ಸುರೇಶ್ ಕುಲಾಲ್ ಕಂಬಳದಡ್ಡ, ಪ್ರಗತಿಪರ ಕೃಷಿಕ ಮೋನಪ್ಪ ಮೂಲ್ಯ ನಲ್ಲಾರಗುತ್ತು,ಗುರಿಕಾರ ವಸಂತ ಕುಲಾಲ್ ಕುರೇವೂರು ಉಪಸ್ಥಿತರಿದ್ದರು. ಸಮಾಜಬಾಂದರ ಮಕ್ಕಳಿಗೆ, ಸಾರ್ವಜನಿಕನಿಕರಿಗೆ ವಿವಿಧ ಸ್ಪರ್ದೆಗಳನ್ನು ಅಯೋಜಿಸಲಾಗಿತ್ತು. ರಾಜೇಶ್ ನೋಜಿಗ ಸ್ವಾಗತಿಸಿ, ನಿರೂಪಿಸಿದರು. ಪ್ರಸಾದ್ ನಲ್ಲಾರ ಗುತ್ತು ವಂದಿಸಿದರು.









