ಅರಸಿನಮಕ್ಕಿ ಅಶ್ವಮೇಧ ಫ್ರೆಂಡ್ಸ್ ಆಶ್ರಯದಲ್ಲಿ ಆರಕ್ಷಕರ, ಫಾರೆಸ್ಟ್, ಮೆಸ್ಕಾಂ ಮತ್ತು ಲೆಜೆಂಡ್ ಇಲೆವೆನ್ ತಂಡಗಳ ಜನಸ್ನೇಹಿ ಸೌಹಾರ್ದ ಟ್ರೋಫಿ

0

ಅರಸಿನಮಕ್ಕಿ: ಅರಸಿನಮಕ್ಕಿ ಮೈದಾನದಲ್ಲಿ ಆರಕ್ಷಕರ, ಮೆಸ್ಕಾಂ, ಫಾರೆಸ್ಟ್ ಡಿಪಾರ್ಟ್ಮೆಂಟ್, ಲೆಜೆಂಡ್ ಇಲೆವೆನ್ ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಸೌಹಾರ್ದ ಟ್ರೋಫಿ ಮಾ.10ರಂದು ನಡೆಯಿತು.

ಉದ್ಘಾಟನೆಯನ್ನು ಉದ್ಯಮಿಗಳು, ಪ್ರಗತಿಪರ ಕೃಷಿಕರಾದ ಧರ್ಮರಾಜ ಗೌಡ ಅಡ್ಕಾಡಿ ನೆರವೇರಿಸಿದರು.

ಇಲಾಖೆಗಳ ಮತ್ತು ಜನರ ನಡುವೆ ಪರಸ್ಪರ ಭಾಂಧವ್ಯ ಮೂಡಿಸುವ ಸಲುವಾಗಿ ಇಂತಹ ಪಂದ್ಯಾಟಗಳು ಸಹಕಾರಿ ಮತ್ತು ಇದರಿಂದ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಗೊಳ್ಳಲು ಸಾಧ್ಯ ಎಂದು ಧರ್ಮರಾಜ ಗೌಡ ಅಡ್ಕಾಡಿ ತಿಳಿಸಿದರು.

LEAVE A REPLY

Please enter your comment!
Please enter your name here