ಬೆಳ್ತಂಗಡಿ: ಉಜಿರೆಯ ಲಾಡ್ಜ್‌ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಡಿ ಮೂವರನ್ನು ಬೆಳ್ತಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಫೆ.6ರಂದು ಉಜಿರೆ ಗ್ರಾಮದ ಉಜಿರೆ ಹಳೆಪೇಟೆಯಲ್ಲಿರುವ ಸುರೇಶ್ ಲಾಡ್ಜ್ ಮತ್ತು ಐಶ್ವರ್ಯಾ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಪೊಲೀಸ್ ನಿರೀಕ್ಷಕ ಬಿ.ಜಿ.ಸುಬ್ಬಾಪೂರ ಮಠ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ವೇಶ್ಯಾವಾಟಿಕೆ ನಿರತರಾಗಿದ್ದ ಆರೋಪದಡಿ ತುಮಕೂರಿನ ಅರಳೇಪೇಟೆಯ ಬದ್ನಾಳ್ ಕಂಪೌಂಡ್‌ನ ರೇಣುಕಾ ಪ್ರಸಾದ್ (29ವ), ಕಾರ್ಕಳ ನಿಟ್ಟೆಯ ರಾಜೇಶ್ ಮೋಹನ್ ನಾಯರ್ (34ವ) ಮತ್ತು ಕಾರ್ಕಳದ ನೂರಾಲ್‌ಬೆಟ್ಟುವಿನ ನಿತಿನ್ ಕುಮಾರ್(28ವ) ಎಂಬವರನ್ನು ವಶಕ್ಕೆ ಪಡೆದು ಸ್ಥಳದಲ್ಲಿದ್ದ ಪ್ರಕರಣದ ನೊಂದ ಮಹಿಳೆಯನ್ನು ಮಹಿಳಾ ಸಿಬ್ಬಂದಿಗಳ ಭದ್ರಿಕೆಗೆ ಕೊಟ್ಟು ಆರೋಪಿಗಳ ವಿರುದ್ಧ ಹಾಗೂ ದಾಳಿಯ ವೇಳೆ ಪರಾರಿಯಾದ ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
p>