ಹೊಸಂಗಡಿ: ಗ್ರಾಮ ಪಂಚಾಯತ್ ನಲ್ಲಿ ಎಫ್.ಟಿ.ಕೆ ತರಬೇತಿ

0

ಹೊಸಂಗಡಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆ-2 ಗ್ರಾಮ್ಸ್ ಮಂಗಳೂರು ಇವರ ಸಹಯೋಗದಲ್ಲಿ “ಜಲ್ ಜೀವನ್ ಮಿಷನ್ ” ಯೋಜನೆಯಡಿಯಲ್ಲಿ ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ಎಫ್.ಟಿ.ಕೆ ತರಬೇತಿಯನ್ನು ಮಾ.07ರಂದು ಆಯೊಜಿಸಲಾಗಿತ್ತು.

ಈ ತರಬೇತಿಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ, ಉಪಾಧ್ಯಕ್ಷೆ ಶಾಂತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಕಾರ್ಯದರ್ಶಿ ಕಾಂತಪ್ಪ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರು, ನೀರು ಘಂಟಿಗಳು‌ ಹಾಗು ಪಂಚಾಯತ್ ಸಿಬ್ಬಂದಿಗಳು ಭಾಗವಹಿಸಿದ್ದರು.

ತರಬೇತಿಯನ್ನು ಗ್ರಾಮ್ಸ್ ರಾಯಚೂರು ಸಂಸ್ಥೆಯ ಜಲ ಜೀವನ್ ಮಿಷನ್ ಬೆಳ್ತಂಗಡಿ ತಾಲೂಕಿನ ಸಮುದಾಯ ಸಂಘಟಕಿ ವಿಶಾಲಾಕ್ಷಿ ರವರು ನೀರಿನ ಗುಣಮಟ್ಟವನ್ನು ಎಫ್.ಟಿ.ಕೆ ಕಿಟ್ ನ ಮೂಲಕ ಪರೀಕ್ಷೆಯನ್ನು ಪ್ರಾತ್ಯಾಕ್ಷಿಕವಾಗಿ ಮಾಡಿ ತೋರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೆಲಸದ ಬಗ್ಗೆ ಚರ್ಚೆ ಮಾಡಿ ನೀರಿನ ಸಮಸ್ಯೆಯಿರುವ ಜನರಿಗೆ ನೀರು ನೀಡುವ ಬಗ್ಗೆ ಚರ್ಚಿಸಲಾಯಿತು.

LEAVE A REPLY

Please enter your comment!
Please enter your name here