

ಪದ್ಮುಂಜ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಎಸ್ ಡಿ ಎಂ ಸಿ ಸಮಿತಿ ಅಧ್ಯಕ್ಷ ಪುರುಷೋತ್ತಮ ರವರ ಅಧ್ಯಕ್ಷತೆಯಲ್ಲಿ ಮಾ.6ರಂದು ಜರಗಿತು.
ಮುಖ್ಯ ಶಿಕ್ಷಕಿ ಕೀರ್ತಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳ ಗುಣನಡತೆಯ ಬಗ್ಗೆ ವಿವರಿಸಿದರು.
ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಗಳು ಮಾತನಾಡಿ ತಮ್ಮ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಅಧ್ಯಾಪಕಿಯರಾದ ತೇಜ, ಅಕ್ಷಿತಾ, ಇಂದಿರಾ, ವಿನಯ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಗೀತಾ, ಪಂ ಸದಸ್ಯ ಸೀತಾರಾಮ ಮಡಿವಾಳ, ಎಸ್ ಡಿ ಎಂ ಸಿ ಸದಸ್ಯ ಕಾಸಿಂ ಪದ್ಮುಂಜ ರವರು ಮಾತನಾಡಿ ಶುಭ ಹಾರೈಸಿದರು.
ಏಳನೇ ತರಗತಿ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಸೀಲಿಂಗ್ ಫ್ಯಾನ್ ಕೊಡುಗೆ ನೀಡಿದರು.

ದಾನಿಗಳಾದ ಸದಾಶಿವ ಶೆಟ್ಟಿ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಪೋಷಕರು ಉಪಸ್ಥಿತರಿದ್ದರು.
ಅಧ್ಯಾಪಕಿ ವಿನಯ ರವರು ಸ್ವಾಗತಿಸಿದರು.ನಳಿನಿಯವರು ಕಾರ್ಯಕ್ರಮ ನಿರೂಪಿಸಿದರು.ಮುಖ್ಯ ಶಿಕ್ಷಕಿ ಕೀರ್ತಿ ಯವರು ಧನ್ಯವಾದ ಸಲ್ಲಿಸಿದರು.