ಮಾ.10: ಇಖ್ರ ಇಂಟರ್‌ ನ್ಯಾಶನಲ್ ಸ್ಕೂಲ್ ಪ್ರಾರಂಭೋತ್ಸವ

0

ಬೆಳ್ತಂಗಡಿ: ಭಾರತದಾದ್ಯಂತ 70ಕ್ಕಿಂತಲೂ ಹೆಚ್ಚು ಶಾಖೆಗಳನ್ನು ಹೊಂದಿರುವ ಇಖ್ರ ಇಂಟರ್‌ನ್ಯಾಶನಲ್ ಸ್ಕೂಲ್ ಇದರ ಶಾಖೆ ಇದೀಗ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಸುನ್ನತ್‌ ಕೆರೆ ಎಂಬಲ್ಲಿ ಈ ಅಧ್ಯಯನ ವರ್ಷದಿಂದ ಪ್ರಾರಂಭಗೊಳ್ಳುತ್ತಿದ.

ನವದೆಹಲಿ, ಜಮ್ಮು ಕಾಶ್ಮೀರ, ತಮಿಳುನಾಡು, ಜಾರ್ಖಂಡ್, ಮುಂಬೈ, ಮಂಗಳೂರು, ಬಿ.ಸಿ.ರೋಡ್ ಸೇರಿದಂತೆ ಭಾರತದಾದ್ಯಂತ ಇಖ್ರ ಇಂಟ‌ರ್ ನ್ಯಾಶನಲ್ ಸ್ಕೂಲ್ ಇದರ ಸುಮಾರು 70 ಶಾಖೆಗಳು ಹರಡಿವೆ.

ಸದ್ರಿ ವಿದ್ಯಾಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯೊಂದಿಗೆ ಇಸ್ಲಾಮಿಕ್ ಅಧ್ಯಯನದ ವ್ಯವಸ್ಥೆಯನ್ನೂ ಮಾಡಲಾಗಿದೆ.ಇಲ್ಲಿನ ಸ್ಥಳೀಯ ಸಣ್ಣ ತರಗತಿಯ ಪುಟ್ಟ ಮಕ್ಕಳಿಗೆ ಶಾಲಾ ಹಾಗೂ ಮದರಸಾ ವಿದ್ಯಾಭ್ಯಾಸಗಳನ್ನು ಒಂದೇ ಸೂರಿನಡಿ ನೀಡುವ ಅಪೂರ್ವ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಿಗ್ಗೆ 7:45ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಶಾಲಾ ಅವಧಿಯಾಗಿರುತ್ತದೆ.

ಪುಟ್ಟ ಮಕ್ಕಳು ಬೆಳಿಗ್ಗೆ ಬೇಗನೇ ಏಳುವ ಒಂದು ಒಳ್ಳೆಯ ಅಭ್ಯಾಸದೊಂದಿಗೆ, ಮಧ್ಯಾಹ್ನ 2 ಗಂಟೆಯ ನಂತರ ಬಿಡುವು ಇರುವುದರಿಂದ ಪುಟ್ಟ ಮಕ್ಕಳಿಗೆ ಶಾಲೆ ಹಾಗೂ ಮದರಸಾ ಹೋಂವರ್ಕ್‌ಗಳನ್ನು ಮಾಡಲು, ಹೆತ್ತವರೊಂದಿಗೆ ಬೆರೆಯಲು, ಆಟವಾಡಲು ಧಾರಾಳ ಸಮಯವೂ ಸಿಗುತ್ತದೆ.ಇದು ಮಕ್ಕಳ ಮಾನಸಿಕ ಹಾಗೂ ದೈಹಿಕ ಕ್ಷಮತೆಯ ಬೆಳವಣಿಗೆಗೆ ಪೂರಕವಾಗಿರುತ್ತವೆ.

ಇಖ್ರ ಇಂಟರ್‌ನ್ಯಾಶನಲ್ ಸ್ಕೂಲ್ ಇದರ ಪ್ರಾರಂಭೋತ್ಸವವು ಮಾ. 10 ರಂದು ಮಧ್ಯಾಹ್ನ 3:30ಕ್ಕೆ ಬೆಳ್ತಂಗಡಿ ಸಂತೆಕಟ್ಟೆ ಮಾರಿಗುಡಿ ದೇವಸ್ಥಾನದ ಎದುರಿನ ಏಕತಾ ಸೌಧ ಸಭಾಭವನ (ಎನ್.ಜಿ.ಓ. ಹಾಲ್) ನಡೆಯಲಿದೆ.ಸಮಾರಂಭದಲ್ಲಿ ಈ ಶಾಲೆಯ ಪ್ರಾಯೋಜಕರು ಮುಂಬೈಯಿಂದ ಆಗಮಿಸಿ, ಸದ್ರಿ ಶಾಲೆಯ ವಿವರಗಳನ್ನು ನೀಡಲಿದ್ದಾರೆ.

ಅಲ್ಲದೆ ಇಖ್ರ ಇಂಟ‌ರ್ ನ್ಯಾಶನಲ್ ಸ್ಕೂಲ್ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸ ಬಯಸುವ ಎಲ್ಲಾ ಹೆತ್ತವರು, ಮಕ್ಕಳು ಹಾಗೂ ಇತರ ಎಲ್ಲಾ ವಿದ್ಯಾಭಿಮಾನಿಗಳು ಭಾಗವಹಿಸಲು ಮುಕ್ತ ಅವಕಾಶವಿದೆ. ದಾಖಲಾತಿ ಹಾಗೂ ಇತರ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ : 9449 555 696 ನ್ನು ಸಂಪರ್ಕಿಸ ಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here