ಪಿಲ್ಯ: ಗುಡ್ ಫ್ಯೂಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಾಲಕ- ಶಿಕ್ಷಕರ ಸಭೆ ಫೆ.24ರಂದು ನಡೆಯಿತು.
ಸಭೆಯ ಉಪಾಧ್ಯಕ್ಷತೆಯನ್ನು ವಹಿಸಿಕೊಂಡ ವೀರೇಂದ್ರ ಕುಮಾರ್ ಜೈನ್ ಇವರು ವಿದ್ಯಾರ್ಥಿಗಳು ಕಷ್ಟಪಡದೆ ಇಷ್ಟ ಪಟ್ಟು ಓದಬೇಕು, ಹಾಗೆಯೇ ಬೆಳಿಗ್ಗೆ ಬೇಗ ಎದ್ದು ಓದುವುದು ಉತ್ತಮ ಹವ್ಯಾಸ ಎಂದು ಪೋಷಕರಿಗೆ ತಿಳಿಸಿದರು.ಹಾಗೂ ಶಾಲಾ ಸಂಚಾಲಕ ನಜೀರ್ ಅಹ್ಮದ್ ಖಾನ್ ಹತ್ತನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ಹೆಚ್ಚು ಪೋಷಕರು ಕೂಡ ಗಮನ ಹರಿಸಬೇಕು ಮತ್ತು ಅವರ ಮುಂದಿನ ಓದಿನ ತಯಾರಿ ಹೇಗಿರಬೇಕು, ವಿದ್ಯಾರ್ಥಿಗಳ ಆರೋಗ್ಯದ ಕಡೆಗೆ ಹೆತ್ತವರು ಗಮನ ಇತ್ಯಾದಿ ವಿಚಾರಗಳನ್ನು ತಿಳಿಸಿದರು.
ಮುಖ್ಯೋಪಾಧ್ಯಾಯಿನಿ ನಿರ್ಮಲಾ ಅವರು ವಿದ್ಯಾರ್ಥಿಗಳು ಯಾವ ರೀತಿ ಮೌಲ್ಯಂಕನ ಪರೀಕ್ಷೆಗೆ ಸಿದ್ಧವಾಗುವುದು ಹಾಗೂ ಮೌಲ್ಯಂಕನ ಪರೀಕ್ಷೆಯ ಕುರಿತು ಮಾಹಿತಿ ನೀಡಿದರು.ಜಂಟಿ ಕಾರ್ಯದರ್ಶಿ ಹರಿಣಾಕ್ಷಿ ಮಕ್ಕಳಿಗೆ ಮನೆಯಿಂದಲೇ ಶಿಕ್ಷಣ ನೀಡಬೇಕು, ಪ್ರತಿ ದಿನ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಮಕ್ಕಳಿಂದ ಕೇಳಿ ತಿಳಿದುಕೊಳ್ಳಬೇಕಾದ ಕರ್ತವ್ಯ ಎಂದು ಪೋಷಕರಿಗೆ ತಿಳಿಸಿದರು.
ಸಹಶಿಕ್ಷಕಿಯಾರದ ಶೋಭಾ ಕಾರ್ಯಕ್ರಮ ನಿರೂಪಿಸಿ, ನಿಶ್ಮಿತ ಸ್ವಾಗತಿಸಿದರು ಹಾಗೂ ಪ್ರಣೀತ ವಂದಿಸಿದರು.