ಮದ್ದಡ್ಕ : ಹಾಲು ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಉದ್ದೇಶ ದಿಂದ ಸಿಕ್ಕೇರಾ ಡೈರಿ ಫಾರ್ಮ್ ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರ ಉದ್ಘಾಟಣೆಯು ಫೆ.25ರಂದು ಕಕ್ಕೆನ ಮದ್ದಡ್ಕದಲ್ಲಿ ನಡೆಯಿತು.
ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್ ಧರ್ಮಗುರು ವಂ. ಸ್ವಾಮಿ ಸ್ಟ್ಯಾನಿ ಗೋವಿಯಸ್ ಆಶೀರ್ವಚನವನ್ನು ನೆರವೇರಿಸಿದರು.ಕಚೇರಿಯನ್ನು ಬೆನೆಡಿಕ್ಟ ಸಿಕ್ವೇರಾ ಉದ್ಘಾಟಿಸಿದರು.
ಡೈರಿ ಘಟಕ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನಿರ್ವಹಿಸಿದರು. ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವ.ಫಾ. ಜೆರೋಮ್ ಡಿಸೋಜಾ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪುನೀತ್ ಕುಮಾರ್, ಬೆಳ್ತಂಗಡಿ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ ಡಾ. ರವಿ ಕುಮಾರ್, ಆಹಾರ ವಿಜ್ಞಾನಿ ನಿವೃತ್ತ ಪ್ರಾದ್ಯಾಪಕರು ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ. ಎ.ಎ. ಪಝಲ್ ಇವರು ಉಪಸ್ಥಿತರಿದ್ದರು.
ಈ ಸಂದರ್ಭ ದಲ್ಲಿ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಲೆನ್ಸಿ ಪಿಂಟೊ, ಮಾಜಿ ತಾ. ಪಂ. ಸದಸ್ಯ ಜೋಯೆಲ್ ಮೆಂಡೋನ್ಸಾ, ಪಾರೆಂಕಿ ಮಹಿಷಮರ್ಧಿನಿ ದೇವಸ್ಥಾನದ ಪ್ರಧಾನ ಅರ್ಚಕ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಧರ ರಾವ್, ಮಡಂತ್ಯಾರ್ ವರ್ತಕರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕಾಂತಪ್ಪ ಗೌಡ, ಮಾಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೆಲೆಸ್ಟಿನ್ ಡಿಸೋಜಾ, ಗ್ರಾ. ಪಂಚಾಯತ್ ಸದಸ್ಯ ಬೆನೆಡಿಕ್ಟ ಮಿರಾಂದ, ಸುಸಾನಾ, ಸೇಕ್ರೆಡ್ ಹಾರ್ಟ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರು, ಗಣ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಿಕ್ಕೇರಾ ಡೈರಿ ಫಾರ್ಮ್ ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕೇಂದ್ರ: ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಮೂರುವರೆ ದಶಕಗಳ ಅನುಭವ ಮತ್ತು ಸಂಶೋಧನೆಗಳನ್ನು ನಡೆಸಿ ವಿವಿಧ ತಳಿಗಳ ದನಗಳನ್ನು ಮನೆಯಲ್ಲಿಯೇ ಸಾಕಿ ಬೆಳೆಸಿ ಇವುಗಳಿಂದ ಕರೆಯಲಾದ ಹಾಲನ್ನು ಮೌಲ್ಯವರ್ದನೆಗೊಳಿಸಿ ಉತ್ತಮ ಗುಣಮಟ್ಟದ ಗೃಹೋಪಯೋಗಿ ಹಾಲು ಮತ್ತು ಹಾಲಿನ ವಿವಿಧ ಬಗ್ಗೆಯ ಉತ್ಪನ್ನಗಳನ್ನು ನೇರ ಗ್ರಾಹಕರಿಗೆ ತಲುಪಿಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಗುವ ಸಂಸ್ಥೆ ನಮ್ಮ ಡೈರಿಯ ಎಲ್ಲಾ ರಾಸುಗಳಿಗೆ ಕಾಲ ಕಾಲಕ್ಕೆ ರೋಗನಿರೋಧಕ ಲಸಿಕೆಯನ್ನು ಹಾಕಿರುವುದರಿಂದ ನಮ್ಮ ಎಲ್ಲಾ ರಾಸುಗಳು ರೋಗ ಮುಕ್ತವಾಗಿದ್ದು ಶುದ್ದ ಹಾಗೂ ಆರೋಗ್ಯಕರ ಹಾಲು ನೀಡುತ್ತಿರುವುದರಿಂದ ಗ್ರಾಹಕರಿಗೆ ಶುದ್ದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನೀಡಲಾಗುತ್ತದೆ. ಸಂಸ್ಥೆಯಲ್ಲಿ ಉತ್ಪಾದನೆಯಾದ ಹಾಲಿಗೆ ನೀರು ಅಥವಾ ಯಾವುದೇ ರೀತಿಯ ವಸ್ತು ಸೇರಿಸುವುದಾಗಲಿ, ಹಾಲಿನಿಂದ ಯಾವುದೇ ಘನ ಪದಾರ್ಥವನ್ನು ತೆಗೆಯುವುದಿಲ್ಲ ತಾವು ದಿನಕ್ಕೆ 1 ಲೀ ಸಿಕ್ವೇರಾ ಡೈರಿ ಫಾರ್ಮ್ ನವರ ಗೋಮಿತ್ರ ಹಾಲನ್ನು ಬಳಸಿದ್ದಲ್ಲಿ ತಿಂಗಳಿಗೆ ಕನಿಷ್ಠ ರೂ. 600/- ಬೆಲೆ ಬಾಳುವ ಶುದ್ದ ತುಪ್ಪವನ್ನು ಮನೆಯಲ್ಲೇ ತಯಾರಿಸಬಹುದು.
ಇದರಿಂದಾಗಿ ರೂ. 40/- ಕ್ಕೆ 1ಲೀ ಹಾಲು ಹಾಗೂ ರೂ. 600/- ಬೆಲೆಬಾಳುವ ತುಪ್ಪ ಸಿಗುತ್ತದೆ. ಪಾಶ್ಚಿಕರಿಸಿದ ಶುದ್ಧ ಹಾಲು (CREAM MILK) ಮೊಸರು, ಮಸಾಲ ಮಜ್ಜಿಗೆ ಮನೆಯಲ್ಲಿ ತಯಾರಿಸಿದ ಶುದ್ಧ ತುಪ್ಪ, ಪನ್ನೀರ್ ನ್ಯಾಯಯುತ ಬೆಲೆಯಲ್ಲಿ ಲಭ್ಯ.