ಡಾ.ವೈ.ಉಮಾನಾಥ ಶೆಣೈ ರಚಿಸಿರುವ “ವೇಣೂರಿನ ವೈಭವ” ಗ್ರಂಥ ಲೋಕಾರ್ಪಣೆ

0

ವೇಣೂರು: ಶ್ರೀ ಧ.ಮಂ.ಕಾಲೇಜಿನ ನಿವೃತ್ತ ಇತಿಹಾಸ ಪ್ರಾದ್ಯಾಪಕ ಡಾ.ವೈ.ಉಮಾನಾಥ ಶೆಣೈ ರಚಿಸಿರುವ ”ವೇಣೂರಿನ ವೈಭವ” ಗ್ರಂಥವು ವೇಣೂರಿನಲ್ಲಿ ನಡೆಯುತ್ತಿರುವ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಮಾರಂಭದ ಮೊದಲ ದಿನ ಮೂಡುಬಿದರೆ ಶ್ರೀ ಜೈನ ಮಠದ ಪಟ್ಟಾಚಾರ್ಯ ಡಾ.ಜಗದ್ಗುರು ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮಿಗಳವರಿಂದ ಲೋಕಾರ್ಪಣೆಗೊಂಡಿತು.

ಈ ಗ್ರಂಥದಲ್ಲಿ ವೇಣೂರಿನ ಇತಿಹಾಸದ ವೈಭವ, ಸಾಂಸ್ಕೃತಿಕ ವೈಭವ, ವೇಣೂರಿನ ಬಾಹುಬಲಿ ಸ್ವಾಮಿ ಆಗಮನದ ವೈಭವ ಮತ್ತು ಇವುಗಳಿಗೆ ಸಂಬಂಧಿಸಿದ ಪ್ರಾಚೀನ ಶಾಸನಗಳು ಇದರಲ್ಲಿ ಸಂಗ್ರಹಿಸಿಕೊಡಲಾಗಿದೆ.ಕನ್ನಡಿಗೇತರ ಯಾತ್ರಾಧಿಗಳ ಉಪಯೋಗಕ್ಕಾಗಿ, ಕನ್ನಡದಂತೆ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಇದರ ಭಾಷಾಂತರವನ್ನೂ ಕೊಟ್ಟಿರುವುದು ಇದರ ವೈಶಿಷ್ಟ್ಯ.

ಈ ಗ್ರಂಥ ಬರೆದು ಪ್ರಸ್ತುತ ಪಡಿಸಿದ ಡಾ.ಶೆಣೈಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದ ವೇದಿಕೆಯ ಮೇಲೆ ಜೈನ ಮುನಿಗಳಾದ ಶ್ರೀ ಅಮೋಘ ಕೀರ್ತಿ ಮುನಿಮಹಾರಾಜರು, ಶ್ರೀ ಅಮರಕೀರ್ತಿ ಮುನಿಮಹಾರಾಜರು ಇಬ್ಬರು ಶ್ವೇತವಸ್ತ್ರಧಾರಿ ಜೈನ ಮಾತಾಜಿಯವರು, ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆಯವರು, ವೇಣೂರು ಬಾಹುಬಲಿಯ ಪ್ರತಿಷ್ಠಾಪಕರ ವಂಶಸ್ಥ ತಿಮ್ಮಣ್ಣರಸ ಡಾ.ಪದ್ಮಪ್ರಸಾದ ಅಜಿಲರು, ಶಾಸಕ ಹರೀಶ್ ಪೂಂಜ, ಮಾಜಿ ಸಚಿವರಾದ ರಮಾನಾಥ ರೈ, ಅಭಯ ಚಂದ್ರ ಜೈನ್, ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಮೊದಲಾದ ಗಣ್ಯರು ಉಪಸ್ಥಿತರಿದ್ಧರು.

ವಿದ್ವಾಂಸ ಮುನಿರಾಜ ರೆಂಜಾಳರು ಕಾರ್ಯಕ್ರಮ ನಿರೂಪಿಸಿದರು.ಅಳದಂಗಡಿ ಅರಮನೆಯ ಅಪೇಕ್ಷೆಯಂತೆ ಗ್ರಂಥಕರ್ತ ಡಾ.ಉಮಾನಾಥ ಶೆಣೈಯವರು ಶ್ರೀ ಬಾಹುಬಲಿ ಸ್ವಾಮಿಗೆ ಜಲದಿಂದ ಮಸ್ತಕಾಭಿಷೇಕವನ್ನು ನಡೆಸಿದರು.

LEAVE A REPLY

Please enter your comment!
Please enter your name here