ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಕೌಟಿಂಗ್ ಸಂಸ್ಥಾಪಕರು ರಾಬರ್ಟ್ ಸ್ಟೀಫನ್ ಸನ್ ಸ್ಮಿತ್ ಬೇಡನ್ ಪಾವೆಲ್ ಅವರ ಜನ್ಮ ದಿನಾಚರಣೆ ಮತ್ತು ಯೋಚನ ದಿನ ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಶಾಲಾ ಸ್ಕೌಟಿಂಗ್ ಮಾಸ್ಟರ್ ಕೂಸಪ್ಪ ಗೌಡ, ಫ್ಲಾಕ್ ಲೀಡರ್ ಪುಷ್ಪಾವತಿ, ಗೈಡ್ ಕ್ಯಾಪ್ಟನ್ ಆನುಷಾ, ಸ್ಕೌಟ್ ಗ್ರೂಪ್ ಲೀಡರ್ ಮಾ. ಧನ್ವಿನ್ ವಿ. ಪಿ, ಗೈಡ್ ಗ್ರೂಪ್ ಲೀಡರ್ ಕುಮಾರಿ ವಂಶಿಕ ಉಪಸ್ಥಿತರಿದ್ದರು.
ಸ್ಕೌಟ್, ಗೈಡ್ ಫ್ಲಾಕ್, ವಿದ್ಯಾರ್ಥಿಗಳ ಸಾಮೂಹಿಕ ಸ್ಕೌಟ್ ಗೀತ ಗಾಯನದ ಮೂಲಕ ಆರಂಭವಾದ ಕಾರ್ಯಕ್ರಮವನ್ನು, ಬೇಡನ್ ಪಾವೆಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದ ಮೂಲಕ ಉದ್ಘಾಟಿಸಿದರು.
ಫ್ಲಾಕ್ ಲೀಡರ್ ಪುಷ್ಪಾವತಿ, ಮಾತನಾಡಿ ಸ್ಕೌಟ್, ಗೈಡ್ ಎಂಬುದು ಅಂತಾರಾಷ್ಟ್ರೀಯ ವ್ಯಾಪ್ತಿಯ ಅತ್ಯಂತ ಕ್ರೀಯಾಶೀಲಾ ಯುವ ಚಳುವಳಿ.ಈ ಶಿಕ್ಷಣವು ಮಕ್ಕಳಲ್ಲಿ ಮೌಲ್ಯಧಾರಿತ ಗುಣಗಳನ್ನು, ಸ್ವಾವಲಂಬಿತನವನ್ನು, ಬೆಳೆಸುತ್ತದೆ.ಎಂದು ತಿಳಿಸುತ್ತಾ ಪಾವೆಲ್ ಅವರು ಸ್ಕೌಟಿಂಗ್ ಹುಟ್ಟು ಹಾಕಿದ ಬಗೆಯನ್ನು ವಿವರಿಸಿದರು.
ಸ್ಕೌಟಿಂಗ್ ಮಾಸ್ಟರ್ ಕೂಸಪ್ಪ ಗೌಡ, ಸ್ಕೌಟ್ ಪ್ರತಿಜ್ಞಾ ವಿಧಿ ಬೋಧಿಸಿದರು.ಬಾಲಕೃಷ್ಣ ನಾಯ್ಕ್ ಮಾತನಾಡಿ ಸ್ಕೌಟ್ ನ ಪ್ರತಿಜ್ಞೆ ಮತ್ತು ಆದರ್ಶಗಳು ಕೇವಲ ಕಲಿಕೆಗೆ ಸೀಮಿತವಾಗದೆ ಆದನ್ನು ಬದುಕಿನಲ್ಲಿ ಆಳವಡಿಸಿಕೊಳ್ಳಿ ಎಂದು ತಿಳಿಸಿದರು.
ಗೈಡ್ ಕ್ಯಾಪ್ಟನ್ ಆನುಷಾ ಕಾರ್ಯಕ್ರಮವನ್ನು ನಿರ್ವಹಣೆ ಮಾಡಿದರು. ಶಾಲಾ ಶಿಕ್ಷಕ ಹಾಗು ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.