ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ನಲ್ಲಿ ಫೆ.17ರಂದು ತಾಲೂಕು ಮಟ್ಟದ ವಿಕಲಚೇತನದ ಸಮನ್ವಯ ಸಭೆ ಹಾಗೂ ಶೇ.24.10, ಶೇ.7.25, ಶೇ.5 ಫಲಾನುಭವಿಗಳಿಗೆ ಸಹಾಯಧನ, ಪೌರಕಾರ್ಮಿಕರಿಗೆ ವಸತಿಗೃಹ ಹಸ್ತಾಂತರವನ್ನು ಶಾಸಕ ಹರೀಶ್ ಪೂಂಜ ನೆರವೇರಿಸಿದರು ಹಾಗೂ ಜಗ ಜ್ಯೋತಿ ಬಸವಣ್ಣನವರ ಛಾಯಾಚಿತ್ರವನ್ನು ಅನವಾರಣಗೊಳಿಸಿ ಪುಷ್ಪನಮನ ಸಲ್ಲಿಸಿದರು.
ಅಮೃತ ನಗರೋತ್ಥಾನ ಹಂತ-4 ಯೋಜನೆಯಡಿ ಹುಣ್ಸೆಕಟ್ಟೆ ಎಂಬಲ್ಲಿ ಪೌರಕಾರ್ಮಿಕರಿಗೆ 24.90 ಲಕ್ಷರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಿದ ವಸ್ತಿ ಗೃಹವನ್ನು ಶಾಸಕ ಹರೀಶ್ ಪೂಂಜ ಪೌರಕಾರ್ಮಿಕರಾದ ಅಶೋಕ್ ಮತ್ತು ಚಂದಪ್ಪರಿಗೆ ಹಸ್ತಾಂತರಿಸಿದರು.ಪಟ್ಟಣ ಪಂಚಾಯತ್ ವ್ಯಾಪ್ತಿಯ 10 ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಶೇ.24.10ರಲ್ಲಿ ಮನೆ ರಿಪೇರಿಗೆ 10,000 ರೂ. ನಂತೆ, ಪರಿಶಿಷ್ಟ ಪಂಗಡದ 6 ಫಲಾನುಭವಿಗಳಿಗೆ ಶೇ.7.25 ರಂತೆ ಮನೆ ರಿಪೇರಿಗೆ 10,000 ರೂ., ಶೇ.5ರಂತೆ 47 ಮಂದಿ ಅಂಗವಿಕಲ ಫಲಾನುಭವಿಗಳಿಗೆ 1,600 ರೂ.ನ ಸಹಾಯಧನದ ಚೆಕ್‌ನ್ನು ಶಾಸಕರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಉಪಾಧ್ಯಕ್ಷ, ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ಸದಸ್ಯರುಗಳಾದ ಲೋಕೇಶ್, ಅಂಬರೀಶ್ ಹಾಗೂ ಜಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ.ಪಂ.ಮುಖ್ಯಾಧಿಕಾರಿ ರಾಜೇಶ್.ಕೆ. ಕಾರ್ಯಕ್ರಮ ನಿರ್ವಹಿಸಿದರು.