ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ಆಶ್ರಯದಲ್ಲಿ ಶಾಸಕ ಹರೀಶ್ ಪೂಂಜ ಇವರ ಸಹಕಾರದೊಂದಿಗೆ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಇವರ ನೇತೃತ್ವದಲ್ಲಿ “ಬೆಳ್ತಂಗಡಿ ಸಂಭ್ರಮ” ಫೆ.17ರಂದು ಮಾರಿಗುಡಿ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಮಂಗಳೂರು ಸಾನಿಧ್ಯ ಸಮೂಹ ಸಂಸ್ಥೆಗಳ ಆಡಳಿತ ಅಧಿಕಾರಿ ಡಾ.ವಸಂತ್ ಕುಮಾರ್ ಶೆಟ್ಟಿ ದೀಪ ಪ್ರಜ್ವಲನೆಗೊಳಿಸಿದರು.
ಸಭಾಧ್ಯಕ್ಷತೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಹಿಸಿದರು.ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ. ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ, ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ, ಪತ್ರಕರ್ತ ಮನೋಹರ್ ಬಳಂಜ, ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಅಗ್ನಿಶಾಮಕ ತುರ್ತುಸೇವೆ ಬೆಳ್ತಂಗಡಿಯ ಉಸ್ಮಾನ್, ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿಯ ಕಾರ್ಯಕ್ರಮ ವ್ಯವಸ್ಥಾಪಕ ಅಜಯ್ ಕಲ್ಲೆಗ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ರಾಜೇಶ್ ಕೋಟ್ಯಾನ್, ಸಾನಿಧ್ಯ ಟ್ರಸ್ಟ್ ಮಹಮ್ಮದ್ ಉಪಸ್ಥಿತರಿದ್ದರು.
ಬೆಳ್ತಂಗಡಿ ಸಂಭ್ರಮದಲ್ಲಿ 100 ವಿವಿಧ ಸ್ಟಾಲ್ ಗಳಿದ್ದು, ಕೃಷಿ ಮೇಳ, ವಾಹನ ಮೇಳ, ಸಾವಯವ ಉತ್ಪನ್ನಗಳ ಮೇಳ, ಖಾದ್ಯ ಮೇಳಗಳೊಂದಿಗೆ ವಿವಿಧ ಸಾಂಸ್ಕೃತಿಕ ಮೇಳ ನಡೆಯಲಿದೆ.
ಕಾರ್ಯಕ್ರಮವನ್ನು ಪುಣ್ಯ ಕೋಟ್ಯಾನ್ ನಿರೂಪಿಸಿದರು.
ಸಂಜೆ ರಾಜಕೇಸರಿ ಡ್ಯಾನ್ಸ್ ಬ್ಲಾಸ್ಟ್- 2024 ನಡೆಯಲಿದೆ.
ಫೆ.18ರಂದು ತಾಲೂಕಿನ ಶಿಕ್ಷಕರೊಂದಿಗೆ ದಿನ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ತಾಲೂಕಿನ ಸರಕಾರಿ ಮತ್ತು ಖಾಸಗಿ ಶಿಕ್ಷಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ.
ಫೆ.19ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ ಹಾಸ್ಯ ವಿನೋದಾವಳಿಗಳೊಂದಿಗೆ ರಾಜ ಕೇಸರಿ ಸಂಗೀತ ಸಂಜೆ 2024 ನಡೆಯಲಿದೆ.