ದಯಾ ವಿಶೇಷ ಶಾಲೆಯಲ್ಲಿ ಉಚಿತ ದಂತ ವೈದ್ಯಕಿಯ ಶಿಬಿರ

0

ಲಾಯಿಲ: ದಯಾ ವಿಶೇಷ ಶಾಲೆಯಲ್ಲಿ ಉಚಿತ ದಂತ ವೈದ್ಯಕಿಯ ಶಿಬಿರವನ್ನು ನಿಟ್ಟೆ ಸ್ಪೇಷಲ್‌ ಚೈಲ್ಡ್‌ ಕೇರ್‌ ಸೆಂಟರ್‌ ( N – Specc ) A B Shetty Memorial Institute of Dental Sciences (ABSMIDS) Sri K Amaranth Shetty Memorial Charitable Trust ವತಿಯಿಂದ ಫೆ.16ರಂದು ನಡೆಸಲಾಯಿತು.

ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಚಾಲಕರು ಮತ್ತು ನಿರ್ದೇಶಕರು ಆದ ವಂ. ಫಾ. ವಿನೋದ್‌ ಮಸ್ಕರೇನ್ಹಸ್‌ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಅಮರಶ್ರೀ ಎ ಶೆಟ್ಟಿ ಹಾಗೂ ಪುನರ್ವ ನಿಟ್ಟೆ ಕಾಲೇಜ್‌ ಆಫ್‌ ನರ್ಸಿಂಗ್‌ ಮತ್ತು ಡಾ. ಸಿಂದ್ಯಾ, ಶಾಂತಿ ಹಾಗೂ ಶಿಕ್ಷಕಿಯರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಶಾಲೆಯ 78 ಮಕ್ಕಳಿಗೆ ಉಚಿತವಾಗಿ ದಂತ ಚಿಕಿತ್ಸೆಯನ್ನು ನೀಡಲಾಯಿತು. ಹಾಗೆಯೇ ಡಾ.ಅಮರಶ್ರೀ ಎ ಶೆಟ್ಟಿ Secreatary N-Specc ಇವರು ಭಾಗಿಯಾಗಿ ವಿಶೇಷ ಮಕ್ಕಳ ಪೋಷಕರಿಗೆ ಮಂಗಳೂರಿನಲ್ಲಿ ನಿಟ್ಟೆ ಅಸ್ಪತ್ರೆಯಲ್ಲಿ ವಿಶೇಷ ಮಕ್ಕಳಿಗೆ ಸಿಗುವ ಎಲ್ಲಾ ಸೌಕರ್ಯಗಳ ಹಾಗೂ ಚಿಕಿತ್ಸೆಗಳ ಬಗ್ಗೆ ತಿಳಿಸಿದರು. ಹಾಗೆಯೇ ಉತ್ತಮ ಆರೋಗ್ಯಕ್ಕೆ ದಂತ ರಕ್ಷಣೆ ಅಗತ್ಯ ಎಂದು ತಿಳಿಸಿದರು.

ವಿಶೇಷ ಮಕ್ಕಳಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮುಖ್ಯ. ಮಕ್ಕಳ ಪೋಷಕರು ಮಕ್ಕಳ ಆರೋಗ್ಯದ ಕಡೇ ಹೆಚ್ಚಿನ ಗಮನಹರಿಸಬೇಕು ಹಾಗೂ ದಂತ ತಪಾಸಣ ಶಿಬಿರ ಅರ್ಥಪೂರ್ಣವಾಗಬೇಕಾದರೆ ಮೊದಲು ಚಿಕಿತ್ಸೆ, ಸೌಕರ್ಯ ಹಾಗೂ ಸಲಕರಣೆಗಳು ಅತ್ಯ ಅವಶ್ಯಕ, ದಯಾ ವಿಶೇಷ ಶಾಲೆಯು ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುತ್ತಾ ಬಂದಿದೆ, ಸಂಸ್ಥೆಯು ಪ್ರತಿಯೊಂದು ಹಂತದಲ್ಲೂ ವಿಶೇಷ ಮಕ್ಕಳಿಗೆ ಸ್ಪಂದಿಸುತ್ತಾ ಬಂದಿದೆ ಹಾಗೂ ಈ ವಿಶೇಷ ಚೇತನ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಾರದೆಂದು ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಾ ಬಂದಿದೆ ಎಂದು ಶಾಲಾ ಸಂಚಾಲಕರು ಮತ್ತು ನಿರ್ದೇಶಕರು ಆದ ವಂ. ಫಾ. ವಿನೋದ್‌ ಮಸ್ಕರೇನ್ಹಸ್‌ ರವರು ಸಲಹೆ ನೀಡಿದರು.

ಈ ಕಾರ್ಯಕ್ರಮವನ್ನು ಮಖ್ಯ ಶಿಕ್ಷಕಿ ದಿವ್ಯಾ ಸ್ವಾಗತಿಸಿ ನಂತರದಲ್ಲಿ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here