ಕಳೆಂಜ: ಗ್ರಾಮ ವ್ಯಾಪ್ತಿಯ ಕಾಯರ್ತ್ತಡ್ಕ ಪೇಟೆಯಲ್ಲಿನ ದಿವ್ಯಜ್ಯೋತಿ ಶಾಲಾ ಮಕ್ಕಳ ಮತ್ತು ಗ್ರಾಮಸ್ಥರ ಮೆರವಣಿಗೆ ಮೂಲಕ ಫೆ.16ರಂದು ರಥವನ್ನು ಬರಮಾಡಿಕೊಡಲಾಯಿತು.ಬಳಿಕ ಗ್ರಾ.ಪಂ. ಆವರಣದಲ್ಲಿ ಬೀದಿ ನಾಟಕ ಪ್ರದರ್ಶನಗೊಂಡಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಉಪಾಧ್ಯಕ್ಷ ವಿಶ್ವನಾಥ್ ಗೌಡ ಹಾರಿತ್ತಕಜೆ ವಹಿಸಿದ್ದರು.ವೇದಿಕೆಯಲ್ಲಿ ಪಂಚಾಯತ್‌ನ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯರು, ಪಂ.ಅಭಿವೃದ್ಧಿ ಅಧಿಕಾರಿಗಳು, ಪಂ.ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಹೇಮಲತಾ ಉಪಸ್ಥಿತರಿದ್ದರು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಪ್ರತಿಮೆಗೆ ಹೂ, ಹಾರ ಹಾಕಿ ದೀಪ ಬೆಳಗಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಹೇಮಲತಾ ರವರು ಸಂವಿಧಾನವನ್ನು ಭೋಧಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರೌಢ ಮತ್ತು ಹಿರಿಯ ಮತ್ತು ಕಿರಿಯ ಪ್ರಾ ಶಾಲಾ ಅಧ್ಯಾಪಕರು ಮತ್ತು ಶಾಲಾ ಮಕ್ಕಳು, ಆಶಾ ಕಾರ್ಯರ್ತೆಯರು, ಅಂಗನವಾಡಿ ಕಾರ್ಯರ್ತೆಯರು, ಆರೋಗ್ಯ ಇಲಾಖಾ ಅಧಿಕಾರಿಗಳು, ಕಳೆಂಜ ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಪಂ.ಸಿಬ್ಬಂದಿಗಳು, ಮತ್ತು ತಾಲೂಕು ಅಕ್ರಮ ಸಕ್ರಮ ಸಮಿತಿಯ ಸದಸ್ಯ ಶ್ರೀಧರ ಕಳೆಂಜ, ಡಿ.ಸಿ.ಸಿ ಸದಸ್ಯ ಪಿ.ಟಿ ಸಬಾಸ್ಟಿನ್, ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ.ಶ್ರೀಧರ ರಾವ್ ಮತ್ತು ಶರತ್ ಕಳೆಂಜ, ಶೇಖರ ಗೌಡ, ಮಾಜಿ ಪಂ ಸದಸ್ಯ ಕುಶಾಲಪ್ಪ ಗೌಡ ಕಜೆ, ಸೀತಾರಾಮ ಕಳೆಂಜ, ಜೈಸನ್, ನಿಡ್ಲೆ ಸೇ.ಸ.ಬ್ಯಾಂಕಿನ ನಿರ್ದೇಶಕ ಅಶೋಕ ಭಟ್, ಕಳೆಂಜ ದಲಿತ ಸಂಘರ್ಷ ಸಮಿತಿ ಇದರ ಸದಸ್ಯರು ಭಾಗವಹಿಸಿದ್ದರು.
ಸ್ಥಳೀಯ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನ ನೀಡಿ ಸೇರಿದ ಎಲ್ಲರಿಗೂ ಸಿಹಿ ತಿಂಡಿ ವಿತರಿಸಲಾಯಿತು.ಕಳೆಂಜ ಪಿಡಿಓ ಹೊನ್ನಮ್ಮ ಕಾರ್ಯಕ್ರಮ ಸ್ವಾಗತಿಸಿ, ಪಂ ಸದಸ್ಯ ಹರೀಶ್ ವಂದಿಸಿದರು.