ಫೆ.17: ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ: ಬೆಳ್ತಂಗಡಿಯಿಂದ ಹತ್ತು ಸಾವಿರ ಕಾರ್ಯಕರ್ತರು ಭಾಗವಹಿಸುವಿಕೆ: ರಕ್ಷಿತ್ ಶಿವರಾಂ- ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ವಠಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ಫೆ.17 ರಂದು ನಡೆಯಲಿದ್ದು ಈ ಸಮಾವೇಶಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.ಪಕ್ಷ ಆದಿಕಾರಕ್ಕೆ ಬಂದ ಬಳಿಕ ತಾಲೂಕಿನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.ಪಕ್ಷ ಎಂದಿಗೂ ತಾಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ತಡೆಗಟ್ಟಿಲ್ಲ.ಕೇವಲ ಕಮಿಷನ್ ವ್ಯವಹಾರಕ್ಕಾಗಿ ಮಾಡಿದ ಕಾಮಗಾರಿಗಳ‌ ವಿರುದ್ಧ ಮಾತ್ರ ದೂರು ನೀಡಿದ್ದೇವೆ.ತಾಲೂಕಿನಲ್ಲಿ ಕಾಮಗಾರಿಯ ಹೆಸರಿನಲ್ಲಿ ನಡೆದಿರುವ ದೊಡ್ಡ ಮಟ್ಟದ ಭ್ರಷ್ಟಾಚಾರವನ್ನು ಜನರ ಮುಂದಿಡುವ ಕಾರ್ಯವನ್ನು ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಬೆಳ್ತಂಗಡಿ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರ ತಿಳಿಸಿದರು.

ತಾಲೂಕಿನಲ್ಲಿ ನಡೆದಿರುವ ಐ.ಬಿಯ ಕಾಮಗಾರಿ, ಗ್ರಂಥಾಲಯದ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ.ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿದೆ, ಕಾಮಗಾರಿಗಳು ನಡೆಯದೆ ಬಿಲ್ ನೀಡುವ ಕಾರ್ಯ ಮಾಡಿದೆ.ಬಿಮಲ್ ಎಂಬ ಕಂಪೆನಿ ತಾಲೂಕಿನಲ್ಲಿ ದೊಡ್ಡ ಅವ್ಯವಸ್ಥೆಯನ್ನು ಮಾಡಿದೆ.ಕಾಂಗ್ರೇಸ್ ಅಭಿವೃದ್ಧಿಯ ಪರ ಇರುವಂತಹ ಸರಕಾರ.ನಾವು ಅಭಿವೃದ್ಧಿಗೆ ಯಾವತ್ತೂ ವಿರೋಧ ಮಾಡಿಲ್ಲ, ಮಾಡುವುದು ಇಲ್ಲ.ಗ್ಯಾರಂಟಿ ಯೋಜನೆ ವಿಶ್ವದಲ್ಲೇ ಬಹುಬೇಗ ದಾಖಲೆ ಸೃಷ್ಟಿಸಿದೆ.58 ಸಾವಿರ ಕೋಟಿ ವೆಚ್ಚದಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ನಿರ್ವಹಿಸುತ್ತಿದ್ದು, ಆರ್ಥಿಕವಾಗಿ ಜನರು ಸದೃಢವಾಗುತ್ತಿದ್ದಾರೆ.ಇನ್ನೂ‌ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಮಾಡಿದೆ.
ಇನ್ನೂ ಐದು‌‌ ಗ್ಯಾರಂಟಿಗಳನ್ನು ಯಾವುದೇ ಬೇಧ-ಭಾವ ಮಾಡದೆ ಯಾವುದೇ ಪಕ್ಷ ನೋಡದೆ ಎಲ್ಲರಿಗೂ ಸಿಗುವ ಹಾಗೆ ಮಾಡಿದ್ದೇವೆ.ಭ್ರಷ್ಟಾಚಾರ ವಿರೋಧ ಸರ್ಕಾರ ನಮ್ಮದಾಗಿದೆ.ಹಿಂದಿನ ಬಿಜೆಪಿ ಸರ್ಕಾರ ಕಳಪೆ ಕಾಮಗಾರಿ ಮಾಡಿದೆ.ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ.ಗ್ಯಾರಂಟಿಗಳು‌ ಎಲ್ಲರಿಗೂ‌ ತಲುಪಲು ನಾವು ಸಮಿತಿಗಳನ್ನು ರಚನೆ ಮಾಡಿದ್ದೇವೆ.

ಶಾಸಕ ಹರೀಶ್ ಪೂಂಜ ತೆರಿಗೆಯ ಬಗ್ಗೆ ಹೇಳಿದ ಮಾತು ಅದೊಂದು ಬಲಿಷ ಹೇಳಿಕೆ ನೀಡಿದ್ದಾರೆ.ವೇಣೂರಿನಲ್ಲಿ ನಡೆಯಲಿರುವ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಜ್ಯ ಸರಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದ ಅವರು ಅದಕ್ಕಾಗಿ ಈಗಾಗಲೇ ಉಸ್ತುವಾರಿ ಸಚಿವರು ಸಮಾಲೋಚನಾ ಸಭೆಗಳನ್ನು ಕರೆದು ಅನುದಾನ ಬಿಡುಗಡೆ ಮಾಡಿದ್ದಾರೆ.

ಮಹೋತ್ಸವಕ್ಕೆ ಪೂರಕವಾಗಿ ಬೆಟ್ಟದ ಸುತ್ತ ಇಂಟರ್ಲಾಕ್ ಅಳವಡಿಕೆ 2 ಅಲ್ಪಸಂಖ್ಯಾತ ವತಿಯಿಂದ 1 ಕೋಟಿ ರೂ.ಅನುದಾನ, ಬೆಟ್ಟದ ಸುತ್ತ ಡಾಮರೀಕರಣ 26 ಲಕ್ಷ ರೂ., ಕುಡಿಯುವ ನೀರಿನ ಪೂರೈಕೆಗೆ 6 ಲಕ್ಷ ರೂ ಅನುದಾನ, ಕಲ್ಲು ಬಸದಿ ಹತ್ತಿರ ತಡೆಗೋಡೆ ನಿರ್ಮಾಣ 50 ಲಕ್ಷ, ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ, ಗುರುವಾಯನಕೆರೆ-ಹೊಸಂಗಡಿ ತನಕ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ 1 ಕೋಟಿ, ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಕೊಳವೆ ಬಾವಿ ನಿರ್ಮಾಣಕ್ಕೆ 1 ಲಕ್ಷ ರೂ., ಮೆಸ್ಕಾಂ ಇಲಾಖೆಯಿಂದ 8 ಲಕ್ಷ ರೂ ಅಭಿವೃದ್ಧಿ ಕಾಮಗಾರಿಗೆ ಸರ್ಕಾರವು ಅನುದಾನ ಮಂಜೂರು ಮಾಡಿದೆ ಹಾಗೂ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಬರುವ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ವ್ಯವಸ್ಥೆಗೆ ಕಲ್ಪಿಸಲಿದೆ ಎಂದರು.

ಸಣ್ಣ ನೀರಾವರಿ ಯೋಜನೆಯಡಿ ತಾಲೂಕಿನ ನಡ ಗ್ರಾಮದ ಕೊಲ್ಲೊಟ್ಟು ಎಂಬಲ್ಲಿ ವೆಂಟೆಂಡ್ ಡ್ಯಾಮ್ ನಿರ್ಮಾಣ, ಇಂದಬೆಟ್ಟು ಗ್ರಾಮದ ದೇವನಾರಿ ಬಾಬು ಮುಗೇರ ಮನೆಯ ಸಮೀಪದ ಸೇತುವೆಯಿಂದ ಅರ್ಧನಾರೀಶ್ವರ ದೇವಸ್ಥಾನದವರೆಗೆ ತಡೆಗೋಡೆ ನಿರ್ಮಾಣ. 75 ಲಕ್ಷ, ಆರಂಬೋಡಿ ಗ್ರಾಮದ ಪಾನೆಮೇರ್ ಕುಂಜಾಡಿ ರಸ್ತೆ ಅಭಿವೃದ್ಧಿ 25 ಲಕ್ಷ, ಕರಾಯ ಗ್ರಾಮದ ಮುಗ್ಗ ಕೂಡು ರಸ್ತೆ ಅಭಿವೃದ್ಧಿ 50 ಲಕ್ಷ, ಕಳಿಯ ಗ್ರಾಮದ ಗೇರುಕಟ್ಟೆ ಹೇರೋಡಿ ಬಿಳಿಬೈಲು ರಸ್ತೆ 50 ಲಕ್ಷ, ಓಡಿಲ್ನಾಳ ಗ್ರಾಮದ ಮುಗುಳಿ ಬ್ರಹ್ಮಯಕ್ಷ ಬಸದಿ ರಸ್ತೆ 15 ಲಕ್ಷ, ಉಜಿರೆ ಗುರಿಪಳ್ಳ ತಾರಂಗಡಿ ಸೇತುವೆ ನಿರ್ಮಾಣ, ಮಚ್ಚಿನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ, ಕ್ರಿಶ್ಚಿಯನ್ ಅಭಿವೃದ್ಧಿಯಡಿ ಸಂತ ಜೋಸೇಫ್ ಚರ್ಚ್ ನಾರಾವಿ, ಕುತ್ತೂರು ಚರ್ಚ್‌ಆವರಣ ಗೋಡೆಗೆ 5.ಲಕ್ಷ, ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್ 10ಲಕ್ಷ, ಸಿಯೋನ್ ಆಶ್ರಮ ಚರ್ಚ್‌ ನೆರಿಯ ಅನುದಾನ, ಅಲ್ಪಸಂಖ್ಯಾತ ಕಲ್ಯಾಣ ವತಿಯಿಂದ ತಣ್ಣೀರುಪಂತ ಗ್ರಾಮದ ಬದ್ರಿಯಾ ಜಮ್ಮಾ ಮಸೀದಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ, ಚಿಬಿದ್ರೆ ಗ್ರಾಮದ ಜಮ್ಮಾ ಮಸೀದಿ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ, ಮಿತ್ತಬಾಗಿಲು ಗ್ರಾಮದ ಕೊಲ್ಲಿ ಪಣಿಕಲ್‌-ದಿಡುಪೆ ರಸ್ತೆ 5.50 ರಸ್ತೆ ಅಭಿವೃದ್ಧಿ, ಶಿಶಿಲ ಗ್ರಾಮದ ಶಿಶಿಲ ಬ್ರಹ್ಮ-ಬೈದರ್ಕಳ- ಗರೋಡಿ-ಓಟ್ಲ-ಪೆರ್ಲ ರಸ್ತೆ ಅಭಿವೃದ್ಧಿ ಕಾಮಗಾರಿ, ಅರಸಿನಮಕ್ಕಿಯಿಂದ ಬರ್ಕುಲ 7.ಕಿಮೀ ರಿಂದ 10 ಕಿ.ಮೀ ರಸ್ತೆ ಅಂದಾಜು 3 ಕೋಟಿ, ಕುವೆಟ್ಟು ಗ್ರಾಮದ ಮದ್ದಡ್ಕದಿಂದ ಲಾಡಿ ರಸ್ತೆ, ಕಿನ್ನಿಗೋಳಿಯಿಂದ ಪಾದೆ ಏರಂಗಲ್ಲು ಜಾಲ್ಯಾರಡ್ಡ ರಸ್ತೆ, ಕೊತ್ತಮಜಲು, ರಾಟೆಗುಡ್ಡೆ ರಸ್ತೆ, ಬಾವುಟ ಗುಡ್ಡೆಯಿಂದ ಮದ್ದಡ್ಕ ಬದ್ಯಾರು ರಸ್ತೆ, ಕೊಂಕೋಡಿ ರಸ್ತೆ ಕಾಂಕ್ರಿಟೀಕರಣ ಆಗಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಕುಮಾರ್ ಗೌಡ, ಜಿ.ಪಂ ಮಾಜಿ ಉಪಾಧ್ಯಕ್ಷ, ಜಿ.ಪಂ ಮಾಜಿ ಸದಸ್ಯರಾದ ಶೇಖ‌ರ್ ಕುಕ್ಕೇಡಿ, ಧರಣೇಂದ್ರ ಕುಮಾ‌ರ್, ನಮಿತಾ, ಕಾಂಗ್ರೇಸ್ ಹಿರಿಯ ಮುಖಂಡೆ ಲೋಕೇಶ್ವರಿ ವಿನಯಚಂದ್ರ, ಬೊಮ್ಮಣ್ಣ ಗೌಡ, ಪದ್ಮನಾಭ ಸಾಲಿಯಾನ್ ಮಾಲಾಡಿ, ಇಸ್ಮಾಯಿಲ್ ಪೆರಿಂಜೆ, ಸುಭಾಶ್ಚಂದ್ರ ರೈ ಅಳದಂಗಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here