ಅರಸಿನಮಕ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

0

ಅರಸಿನಮಕ್ಕಿ: ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ನೆರವೇರಿಸಿ ಶುಭ ಹಾರೈಸಿದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಯಣ್ಣ ಸಿ.ಡಿ ಉಪಸ್ಥಿತರಿದ್ದು ಮಾತನಾಡಿದ ಅವರು 2009ರಲ್ಲಿ ಈ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು.ಆಗಲೇ ಹೊಸ ಕಟ್ಟಡದ ಅವಶ್ಯಕತೆ ಕಾಡುತ್ತಿತ್ತು.ಈಗ ಅದು ನೆರವೇರತ್ತಿರುವುದು ತುಂಬಾ ಸಂತಸವಾಗುತ್ತಿದೆ.ಒಳ್ಳೆಯ ಕಟ್ಟಡ ನಿರ್ಮಾಣವಾಗಿ ಇನ್ನಷ್ಟು ಮಕ್ಕಳು ವಿದ್ಯಾಭ್ಯಾಸ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಎಸ್ ಮಾತನಾಡಿ ಕಾಲೇಜಿಗೆ ಕೊಠಡಿ ಅವಶ್ಯಕತೆ ಮೊದಲಿಂದಲೂ ಇತ್ತು.ಶಾಸಕರ ಪ್ರಯತ್ನದಿಂದ 55 ಲಕ್ಷ ಅನುದಾನ ದೊರೆತಿದ್ದು ಅನುಕೂಲವಾಯಿತು.ಇನ್ನು ಹೈಸ್ಕೂಲ್ ಗೆ ಕೂಡ ಕೊಠಡಿ ಅವಶ್ಯಕತೆ ಬಹಳ ಇದ್ದು ಶಾಸಕರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕಾಲೇಜಿನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಘವೇಂದ್ರ ನಾಯಕ್ ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ವಾಮನ ತಾಮನ್ಕರ್, ಅರಿಕೆಗುಡ್ಡೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಶ್ರೀರಂಗ ದಾಮ್ಲೆ, ಗಣೇಶ್ ಕೆ ಹೊಸ್ತೋಟ, ಹತ್ಯಡ್ಕ ಪ್ರಾ.ಕೃ.ಪ.ಸ.ಸ ನಿರ್ದೇಶಕರಾದ ಮುರಳಿಧರ್ ಶೆಟ್ಟಿಗಾರ್, ವೃಶಾಂಕ್ ಖಾಡಿಲ್ಕರ್, ಕಾಲೇಜ್ ಪ್ರಿನ್ಸಿಪಾಲ್ ರಾಮಯ್ಯ ಶೆಟ್ಟಿ, ಹೈಸ್ಕೂಲ್ ಮುಖ್ಯಗುರುಗಳಾದ ಚಂದ್ರು, ಕಾಲೇಜು ಉಪನ್ಯಾಸಕರುಗಳು, ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತವನ್ನು ರಾಮಯ್ಯ ಶೆಟ್ಟಿ, ಧನ್ಯವಾದವನ್ನು ರಾಘವೇಂದ್ರ ನಾಯಕ್ ನೆರವೇರಿಸಿದರು.

LEAVE A REPLY

Please enter your comment!
Please enter your name here