

ಬೆಳ್ತಂಗಡಿ: ಮಾಜಿ ಜಿಪಂ ಉಪಾಧ್ಯಕ್ಷರು, ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕರಾಗಿದ್ದ ನಿರಂಜನ್ ಬಾವಂತಬೆಟ್ಟು ರವರ ಅಕಾಲಿಕ ನಿಧನವು ತುಂಬಲಾರದ ನಷ್ಟವನ್ನುಂಟು ಮಾಡಿದ್ದು ಅಗಲಿದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೆಳ್ತಂಗಡಿ ಮಾಜಿ ಶಾಸಕ ಕೆ.ವಸಂತ ಬಂಗೇರ ಸಂತಾಪ ಸೂಚಿಸಿದ್ದಾರೆ.
ತನ್ನ ರಾಜಕಾರಣದುದ್ದಕ್ಕೂ ನನ್ನ ಜೊತೆ ನಿಂತು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾಗಿ ತಾಲೂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದರು. ಮುಖ್ಯವಾಗಿ ಹಲವಾರು ಸರಕಾರಿ ಶಾಲಾ ಕಾಲೇಜು ಸ್ಥಾಪನೆಯಲ್ಲಿ ಮುತುವರ್ಜಿ ವಹಿಸಿ ನನ್ನ ಜೊತೆ ಕೆಲಸ ಮಾಡಿದ್ದ ಅವರು ಸಹಕಾರಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅದ್ವಿತೀಯವಾಗಿದ್ದು, ಅವರ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.