ಫೆ.17-26: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ- ಆಕರ್ಷಣೀಯವಾಗಿ ಕಂಗೊಳಿಸುತ್ತಿರುವ ಚಪ್ಪರ

0

ಬೆಳ್ತಂಗಡಿ: ತಾಲೂಕಿನ ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ.ಸಂಪೂರ್ಣ ಶಿಲಾಮಯಗೊಂಡಿರುವ ಕ್ಷೇತ್ರ ಫೆಬ್ರವರಿ 17ರಿಂದ 26ರವರೆಗೆ ಉತ್ಸವಕ್ಕೆ ಸಜ್ಜಾಗಿ ನಿಂತಿದೆ.ದೇವಿಯ ಪ್ರಾಂಗಣ ಭಕ್ತ ಗಣವನ್ನು ಕೈಬೀಸಿ ಕರೆಯುತ್ತಿದೆ.ಭರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ.

ಆಕರ್ಷಣೀಯವಾಗಿ ಕಂಗೊಳಿಸುತ್ತಿರುವ ಚಪ್ಪರ: ತುಳುನಾಡಿನ ಆಚಾರ-ವಿಚಾರ ಸಂಸ್ಕೃತಿಯಲ್ಲಿ ಚಪ್ಪರಕ್ಕೆ ಅದರದ್ದೇ ಆದ ಮಹತ್ವವಿದೆ. ಬ್ರಹ್ಮಕಲಶೋತ್ಸವ, ನೇಮೋತ್ಸವ ಶುಭಾ ಕಾರ್ಯಗಳು ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ಚಪ್ಪರ ಮುಹೂರ್ತ ಮಾಡಿ ಚಪ್ಪರ ಹಾಕುವುದು ವಾಡಿಕೆ.

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ತೆಂಗಿನ ಗರಿಯನ್ನು ಬಳಸಿಕೊಂಡು ಸುಂದರವಾದ ಚಪ್ಪರ ನಿರ್ಮಾಣ ಕಾರ್ಯವಾಗಿದೆ.ದೇವಾಲಯದ ಹೊರಾಂಗಣ, ಸಭಾಭವನದಲ್ಲಿ ಚಪ್ಪರ ಹಾಕಿದ್ದು, ಪರಿಸರ ಸೊಬಗಿನಲ್ಲಿ ದೇವಾಲಯ ಕಂಗೊಳಿಸುತ್ತಿದೆ. ಹೆಚ್ಚಿನ ಕಡೆಗಳಲ್ಲಿ ಶಾಮಿಯಾನ, ಶೀಟ್ ‌ಹಾಕುತ್ತಾರೆ.

ಆದರೆ ಇಲ್ಲಿ ಚಪ್ಪರ ಹಾಕಿದ್ದು ತುಳುನಾಡಿನ ಆಚಾರ-ವಿಚಾರಕ್ಕೆ ಪ್ರಾಶಸ್ತ್ಯ ನೀಡಿದಂತಾಗಿದೆ. ದೇವಾಲಯದಲ್ಲಿ ಭರದಿಂದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಬ್ರಹ್ಮಕಲೋತ್ಸವಕ್ಕೆ ಸಜ್ಜಾಗಿತ್ತಿದೆ.

p>

LEAVE A REPLY

Please enter your comment!
Please enter your name here