ನಯನಾಡು: ವಿಧ್ಯಾರ್ಥಿಗಳಲ್ಲಿ ಸ್ವಾವಲಂಬನೆ ಮತ್ತು ವ್ಯಕ್ತಿತ್ವ ಬೆಳೆಸಿಕೊಳ್ಳಲು ಕೇವಲ ಪಠ್ಯಕ್ರಮದಿಂದ ಮಾತ್ರ ಸಾಲದು.ಹಳ್ಳಿ ಜೀವನದ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ನಯನಾಡು ಸಂತ ಫ್ರಾನ್ಸಿಸ್ ಆಸ್ಸಿಸ್ ಚರ್ಚಿನ ಧರ್ಮ ಗುರುಗಳಾದ ರೆ.ಫಾ.ಅನಿಲ್ ಅವಿಲ್ಡ್ ಲೋಬೋ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ಸೇಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ಇದರ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ನಯನಾಡು ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 8 ರಂದು ನಡೆಯಿತು.
“ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ” ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಗೊಂಡಿರುವ ಈ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸೇಕ್ರೆಟ್ ಹಾರ್ಟ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ರೆ. ಡಾ.ಸ್ಟ್ಯಾನಿ ಗೋವಿಯಸ್ ವಹಿಸಿದ್ದರು.
ಸೇಕ್ರೆಟ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರವರು ಮಾತನಾಡಿ ಸ್ವಯಂಸೇವಕ ಸೇವಕರಿಗೆ ಶಿಬಿರದ ಮಹತ್ವವನ್ನು ತಿಳಿಸಿದರು.
ಈ ಶಿಬಿರಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ರತ್ನಾಕರ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಯಮುನಪ್ಪ ಕೊರವರ್, ನಯನಾಡು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಲ್ಯಾನ್ಸಿ ಡಿಸೋಜಾ, ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸಿಸ್ಟರ್ ಮೋಂತಿ ಡಿಸೋಜಾ ರವರು ಮಾತನಾಡಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಯೋಜನಾಧಿಕಾರಿಗಳಾದ ಪ್ರಶಾಂತ ಎಂ, ಜೀವ ವಿಸಿ, ರಕ್ಷಿತಾ ಶೆಟ್ಟಿ, ಘಟಕ 1 ಹಾಗೂ ಘಟಕ 2ರ ಎಲ್ಲಾ ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲಾ ಅತಿಥಿಗಳನ್ನು ಸ್ವಯಂ ಸೇವಕಿ ಧನಲಕ್ಷ್ಮಿ ಸ್ವಾಗತಿಸಿದರು.ಸ್ವಯಂ ಸೇವಕ ಸುಕೇಶ್ ವಂದಿಸಿದರು.ಕಾರ್ಯಕ್ರಮವನ್ನು ಸ್ವಯಂ ಸೇವಕಿ ಸೌಂದರ್ಯ ಎ.ಪಿ ನಿರೂಸಿದರು.