ಪ್ರಾ.ಕೃ.ಪ. ಸ. ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಯೂನಿಯನ್ ವತಿಯಿಂದ ಒಂದು ದಿನದ ತರಬೇತಿ ಕಾರ್ಯಕ್ರಮ

0

ಬೆಳ್ತಂಗಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಯೂನಿಯನ್ ವತಿಯಿಂದ ನಡೆದ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕಿನ ನಿರ್ದೇಶಕರು ಹಾಗೂ ಕೊಕ್ಕಡ ಪ್ಯಾಕ್ಸ್ ಅಧ್ಯಕ್ಷ ಕುಶಾಲಪ್ಪ ಗೌಡ ಅವರು ಉದ್ಘಾಟನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಯೂನಿಯನ್ ಅಧ್ಯಕ್ಷೆ ಸುಕೇಶಿನಿ ಎ., ಪಡಂಗಡಿ ಪ್ಯಾಕ್ಸ್ ಸಿ ಇ ಓ, ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕರು ಸುಧೀರ್ ಕುಮಾರ್, ಸಂಪನ್ಮೂಲ ವ್ಯಕ್ತಿ ಗಳಾದ ಶ್ರೀಶ ಹಾಗೂ ಮನಮಾಲಿ ಹೆಬ್ಬಾರ್, ಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ಸಿರಾಜುದ್ದಿನ್ ಹಾಗೂ ಸುದರ್ಶನ್ ಹಾಗೂ ಯೂನಿಯನ್ ಕಾರ್ಯದರ್ಶಿ ಪ್ರಸಾದ್ ಭಾಗವಹಿಸಿ ಕಾರ್ಯಕ್ರಮವನ್ನು ನಾರಾವಿ ಪ್ಯಾಕ್ಸ್ ಸಿ ಇ ಓ ಶಶಿಕಾಂತ್ ನಿರೂಪಣೆ ಮಾಡಿದರು. ಬೆಳ್ತಂಗಡಿ ತಾಲೂಕಿನ ಎಲ್ಲಾ ಪ್ಯಾಕ್ಸ್ ಗಳಿಂದ ಸುಮಾರು ಎಂಬತ್ತು ಮಂದಿ ಬಾಗವಹಿಸಿ ತರಬೇತಿ ಪ್ರಯೋಜನವನ್ನು ಪಡೆದರು.

LEAVE A REPLY

Please enter your comment!
Please enter your name here