ಫೆ.11: ನೇರೋಳ್ ಪಲ್ಕೆಯಲ್ಲಿ ಸಾಮೂಹಿಕ ಶನೀಶ್ವರ ಪೂಜೆ

0

ಕನ್ಯಾಡಿ: ಇಲ್ಲಿಯ ನೇರೋಳ್ ಪಲ್ಕೆ ಕೇಸರಿ ಗೆಳೆಯರ ಬಳಗದಿಂದ 11ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ ಫೆ.10ರಂದು ನೇರೋಳ್ ಪಲ್ಕೆ ಅಂಗನವಾಡಿ ವಠಾರದಲ್ಲಿ ವೇದಮೂರ್ತಿ ಶ್ರೀ ಅನಂತರಾಮ ಉಪಾಧ್ಯಾಯ ಇಂದಬೆಟ್ಟು ಇವರ ವೈದಿಕ ನೇತೃತ್ವದಲ್ಲಿ ನಡೆಯಲಿದೆ.

ಸಂಜೆ 5.00 ಗಂಟೆಗೆ ಶ್ರೀ ಶನೀಶ್ವರ ಪೂಜೆ ಪ್ರಾರಂಭ, ರಾತ್ರಿ 7.00ಕ್ಕೆ ಮಹಾಪೂಜೆ, ರಾತ್ರಿ 7.30ಕ್ಕೆ ಆಹ್ವಾನಿತ ತಂಡದಿಂದ ಕುಣಿತ ಭಜನೆ, ಪ್ರಸಾದ ವಿತರಣೆ, ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಕುಣಿತ ಭಜನೆಯ ದೀಪ ಪ್ರಜ್ವಲನೆ ಹಾಗೂ ಆಶೀರ್ವಚನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ಸಾದ್ವಿ ಶ್ರೀ ಮಾತಾನಂದಮಯಿ ನೆರವೇರಿಸಲಿದ್ದಾರೆ.

ರಾತ್ರಿ 9.00ರಿಂದ ಮಂದಾರ ಕಲಾವಿದರು ಉಜಿರೆ ಅರ್ಪಿಸುವ ‘ಬ್ರಹ್ಮದಂಡ’ ಭಕ್ತಪ್ರಧಾನ ಸಾಂಸಾರಿಕ ತುಳು ಸಾಮಾಜಿಕ ಹಾಸ್ಯಮಯ ನಾಟಕ ನಡೆಯಲಿದೆ.

LEAVE A REPLY

Please enter your comment!
Please enter your name here