ದ.ಕ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಪಂದ್ಯಾಟ ಹಾಗೂ ಕ್ರೀಡಾಕೂಟ

0

ಉಜಿರೆ: ದೈಹಿಕ ಶಿಕ್ಷಣ ಆರೋಗ್ಯಕ್ಕೆ ಅತೀ ಅಗತ್ಯ.ದೈಹಿಕ ಶಿಕ್ಷಕರು ಶಿಸ್ತು, ಸಂಯಮ, ದೈಹಿಕ ಅರೋಗ್ಯದ  ಮಾರ್ಗದರ್ಶಕರಾಗಿ ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚಳಿಯದೆ ಉಳಿಯುತ್ತಾರೆ.ದೈಹಿಕ  ಆರೋಗ್ಯದಂತೆ ಮಕ್ಕಳಲ್ಲಿ ಮನಸ್ಸಿನ ಆರೋಗ್ಯದ ಕಡೆಗೂ ಆದ್ಯತೆ ನೀಡಬೇಕು.

ಯೋಗದ ಕಾರಣದಿಂದ ಮನಸ್ಸಿನ ಮೇಲೆ ವ್ಯಾಯಾಮ ಪರಿಣಾಮ ಬೀರುತ್ತದೆ.ದೈಹಿಕ ಶಿಕ್ಷಕರಿಗೂ ಇತರ ಶಿಕ್ಷಕರಂತೆ ಸಮಾನ ಸ್ಥಾನಮಾನ, ಭಡ್ತಿ, ಗೌರವ ಸಿಗಬೇಕು ಎಂದು ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ನುಡಿದರು.ಅವರು ಫೆ.3ರಂದು ಉಜಿರೆ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ದ.ಕ ಜಿಲ್ಲೆ ಹಾಗೂ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ನಡೆದ ದ.ಕ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಪಂದ್ಯಾಟಗಳು ಹಾಗು ಕ್ರೀಡಾಕೂಟವನ್ನು 
 ಧ್ವಜಾರೋಹಣಗೈದು ಹಾಗೂ ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.

ದ.ಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷೆ ಲಿಲ್ಲಿ ಪಾಯಸ್ ಅಧ್ಯಕ್ಷತೆ ವಹಿಸಿ ಎಲ್ಲರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.ಮುಖ್ಯ ಅತಿಥಿ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್  ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವಪೂರ್ಣವಾದುದು.

ದ್ರೋಣಾಚಾರ್ಯರಂತೆ ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ಮಿಂಚುವಂತೆ ಮಾಡುವ  ಶಿಕ್ಷಕರ ಸಾಧನೆ ಅಮೋಘವಾದುದು.ಯಾವುದೇ ಒತ್ತಡ ನಿವಾರಿಸಿಕೊಂಡು ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳಲು ಕ್ರೀಡೆ ಪ್ರಮುಖ ಮಾಧ್ಯಮವಾಗಿದೆ ಎಂದು ಅಭಿನಂದಿಸಿದರು.ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್ ಕಳೆದ ಬಾರಿ ತಾಲೂಕಿನ ಕ್ರೀಡಾ ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳನ್ನು ನೀಡಿ, ದೈಹಿಕ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಗಿತ್ತು.

ಈ ಬಾರಿ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಕರನ್ನು ಗೌರವಿಸುವ ಅವಕಾಶ ದೊರೆತಿರುವುದು ಸಂತೋಷದಾಯಕ.ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವರ ಬಾಳಿಗೆ ಬೆಳಕು ನೀಡುವ  ದೈಹಿಕ ಶಿಕ್ಷಕರ ಪರಿಶ್ರಮ, ಸೇವೆ ಸಮಾಜಕ್ಕೆ ನಿರಂತರವಾಗಿರಲಿ ಎಂದು ಆಶಿಸಿ ಶುಭ ಕೋರಿದರು.

ದ ಕ. ಜಿಲ್ಲಾ  ದೈಹಿಕ ಶಿಕ್ಷಣ ಅಧಿಕಾರಿ ಭುವನೇಶ್ ಜೆ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಗಳಾದ ಸುಜಯಾ ಬೆಳ್ತಂಗಡಿ, ರವಿಶಂಕರ್ ಮಂಗಳೂರು, ನಿತ್ಯಾನಂದ ಶೆಟ್ಟಿ ಮೂಡಬಿದ್ರೆ, ಆಶಾ ನಾಯಕ್ ಸುಳ್ಯ, ಎಸ್. ಡಿ‌.ಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾ ವಿಭಾಗದ ಕಾರ್ಯದರ್ಶಿ ರಮೇಶ್, ಜಿಲ್ಲೆ ಮತ್ತು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣಾನಂದರಾವ್, ರವಿರಾಜ್ ಗೌಡ, ಜಯರಾಜ ಜೈನ್, ಅಖಿಲ್ ಕುಮಾರ್, ಪ್ರವೀಣ್ ಕುಮಾರ್, ನಿರಂಜನ್, ಆರತಿ ಮತ್ತಿತರರು ಉಪಸ್ಥಿತರಿದ್ದರು.ಕೃಷ್ಣಾನಂದ ರಾವ್ ಸ್ವಾಗತಿಸಿ, ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ಬೆಳ್ತಂಗಡಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಕಾರ್ಯದರ್ಶಿ ನಿರಂಜನ್ ವಂದಿಸಿದರು.

ನಿವೃತ್ತ ದೈಹಿಕ ಶಿಕ್ಷಕರ ಸನ್ಮಾನ: ಇದೇ  ಸಂದರ್ಭದಲ್ಲಿ  2023-24ನೇ ಸಾಲಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಎಸ್ ಬಿ.ನರೇಂದ್ರಕುಮಾರ್, ಯುವರಾಜ ಅನಾರು , ಹೈದರ್ ಪಡಂಗಡಿ, ವಿಶ್ವನಾಥ್, ಜತ್ತಪ್ಪ ಗೌಡ, ಇಬ್ರಾ ಹಿಮ್ ಕೊಲ್ನಾಡು, ಜಯರಾಮ ಗೌಡ, ರೇವತಿ, ಸುರೇಶ ಕುಮಾರ್ ಕುದ್ಮಾರು, ರುದ್ರಮುನಿ ರೆಡ್ಡಿ, ಐರಿನ್ ಡಿಸಿಲ್ವ, ರುಕ್ಮಿನ  ಕುವೆಲ್ಲೊ, ಹಿಲೇರಿ ಮಸ್ಕರೇನ್ಹಸ್, ಬಾಲಕೃಷ್ಣ ಮೂಲ್ಯ, ಮುಕ್ತ ಕೆ., ಜನೆಟ್ ಬೆನೆಡಿಕ್ಟ್, ಡೊನಾಲ್ಡ್ ಲೋಬೊ, ಮೀನಾಕ್ಷಿ, ಕೆ.ಜಯರಾಮ ಶೆಟ್ಟಿ, ವೆನ್ಸಿ ಡಿಸೋಜಾ, ಎ.ಜಿ.ಭವಾನಿ, ತೀರ್ಥರಾಮ ಸುಳ್ಯ, ಶಶಿಕಲಾ ಸುಳ್ಯ, ಪ್ರಶಾಂತ್ ಬಂದಾರು, ಗುಣಪಾಲ್ ಎಂ.ಎಸ್ ಮುಂಡಾಜೆ  ಅವರನ್ನು ಗಣ್ಯ ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಅನಿಲ್ ಕುಮಾರ್ ಸನ್ಮಾನಿತರ ವಿವರ ನೀಡಿದರು.ನಿವೃತ್ತ ಶಿಕ್ಷಕರಿಗೆ ಸನ್ಮಾನದ ಪರಿಕರಗಳನ್ನು ಒದಗಿಸಿ ನೆರವಾದ ಉಜಿರೆ ಲಕ್ಷ್ಮಿ ಇಂಡಸ್ಟ್ರೀಸ್ ನ ಮಾಲಕ ಕೆ.ಮೋಹನ್ ಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಿ ಪುರಸ್ಕರಿಸಲಾಯಿತು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬೆಳ್ತಂಗಡಿ  ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ದೈಹಿಕ ಶಿಕ್ಷಕರಿಗೆ ಕ್ರೀಡಾಕೂಟದಲ್ಲಿ  40ರ ವಯೋಮಾನದವರಿಗೆ, 50 ಹಾಗೂ 60 ವಯೋಮಾನದವರಿಗೆ 100ಮೀ., 400ಮೀ. ಓಟ, ಉದ್ದ ಜಿಗಿತ, ಗುಂಡು ಎಸೆತ ಮೊದಲಾದ ಸ್ಪರ್ಧೆಗಳು, ಪುರುಷರಿಗೆ ವಾಲಿಬಾಲ್, ಕಬಡ್ಡಿ, ಮಹಿಳೆಯರಿಗೆ ತ್ರೋಬಾಲ್ ಹಾಗೂ ವಾಲಿಬಾಲ್, ಹಗ್ಗ ಜಗ್ಗಾಟ ಮತ್ತು ಗುಂಪು ಆಟಗಳು ನಡೆದವು.

LEAVE A REPLY

Please enter your comment!
Please enter your name here