ಅಕ್ರಮ ಸಿಮ್ ಕಾರ್ಡ್ ಹೊಂದಿದ್ದ ಐವರನ್ನು ಬಂದಿಸಿದ ಧರ್ಮಸ್ಥಳ ಪೊಲೀಸರು

0

ಧರ್ಮಸ್ಥಳ: ಮಂಗಳೂರಿನಿಂದ ಬೆಂಗಳೂರಿಗೆ ನಿಗೂಢ ಕೆಲಸಕ್ಕಾಗಿ ಹೊರಟಿದ್ದ ಯುವಕರ ತಂಡವೊಂದು ಸೆರೆಯಾಗಿದೆ.

ಧರ್ಮಸ್ಥಳ ಪೊಲೀಸರು ಯುವಕರನ್ನು ತಪಾಸಣೆ ನಡೆಸಿದಾಗ 40ಕ್ಕೂ ಹೆಚ್ಚು ಅಕ್ರಮ ಸಿಮ್​ಗಳು ಪತ್ತೆಯಾಗಿದೆ.ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರಿಗೆ ಮತ್ತಷ್ಟು ಮಾಹಿತಿಗಳು ತಿಳಿದುಬಂದಿದೆ.

ಅನುಮಾನಾಸ್ಪದ ನಡೆ ಹಿನ್ನೆಲೆ ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಗ್ಯಾಂಗ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಕ್ರಮ ಸಿಮ್​ಗಳ ಸಾಗಾಟ ಬಯಲಿಗೆ ಬಂದಿದೆ.

5 ಜನ ಯುವಕ ತಂಡ 42 ಅಕ್ರಮ ಸಿಮ್​ಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದಾಗ ಧರ್ಮಸ್ಥಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನೆರಿಯ ಗ್ರಾಮದಲ್ಲಿ ಯುವಕರನ್ನು ಬಂಧಿಸಿ ಸಿಮ್​ಗಳನ್ನು ಜಪ್ತಿ ಮಾಡಲಾಗಿದೆ.

ರಮೀಝ್ (20), ಅಕ್ಬರ್ ಅಲಿ (24), ಮೊಹಮ್ಮದ್ ಮುಸ್ತಫಾ (22) ಮೊಹಮ್ಮದ್ ಸಾಧಿಕ್ (27) ಬಂಧಿತ ಆರೋಪಿಯಾಗಿದ್ದು, ಪ್ರಕರಣದಲ್ಲಿ 17 ವರ್ಷದ ಅಪ್ರಾಪ್ತ ಬಾಲಕನೂ ಸಿಲುಕಿದ್ದಾನೆ.ಆರೋಪಿ ಅಕ್ಬರ್​ ಅಲಿ ದುಬೈನಲ್ಲಿ ಇದ್ದಾಗ ಬೇರೆಯವರ ಹೆಸರಿನಲ್ಲಿ ನಕಲಿ ದಾಖಲೆ ಕೊಟ್ಟು ಸಿಮ್​ ಖರೀದಿ ಮಾಡಿದ್ದ.ಎರಡು ವರ್ಷಗಳ ಕಾಲ ದುಬೈನಲ್ಲಿದ್ದ ಈತ ನಾಲ್ಕು ತಿಂಗಳ ಹಿಂದೆ ಊರಿಗೆ ಮರಳಿದ್ದ.ವಿದೇಶದ ನಂಟು ಇರುವುದರಿಂದ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.ಮಂಗಳೂರಿನಿಂದ ಬೆಂಗಳೂರಿಗೆ ಆರೋಪಿಗಳು ಸಾಗಿಸುತ್ತಿದ್ದ ನಕಲಿ ಸಿಮ್​ಗಳು ಬೆಂಗಳೂರಿನಲ್ಲಿರುವ ಆಗಂತುಕರ ಕೈ ಸೇರುತ್ತಿತ್ತಾ ಎನ್ನುವ ಶಂಕೆ ವ್ಯಕ್ತವಾಗಿದೆ. ಅಕ್ಬರ್ ಆಲಿ ಮೊದಲಿನಿಂದಲೂ ದುಬೈನಲ್ಲಿ ಇದ್ದುಕೊಂಡೇ ಸಿಮ್ ಕಾರ್ಡ್ ಸಂಗ್ರಹಿಸುತ್ತಿದ್ದನು. ತನ್ನ ಸ್ನೇಹಿತ ಮೊಹಮ್ಮದ್ ಮುಸ್ತಫಾನ ಮೂಲಕ ಸಿಮ್​ಗಳನ್ನು ಕಲೆಕ್ಟ್​ ಮಾಡುತ್ತಿದ್ದನು.ಮೊಹಮ್ಮದ್ ಮುಸ್ತಫಾ ತನ್ನ ಸ್ನೇಹಿತರಾಗಿರುವ ರಮೀಝ್ ಮತ್ತು ಮಹಮ್ಮದ್ ಸಾಧಿಕ್​ಗೆ ಸಿಮ್​ಗಳ ವ್ಯವಸ್ಥೆಗೆ ಸೂಚನೆ ನೀಡುತ್ತಿದ್ದನು. ಎಷ್ಟು ಸಿಮ್ ಕಾರ್ಡ್ ಬೇಕು ಅಷ್ಟುನ್ನು ತಮ್ಮ ಆತ್ಮಿಯರಿಂದ ಕಮಿಷನ್ ಕೊಡಿಸಿ ಕಲೆಕ್ಟ್ ಮಾಡಿ ಮುಸ್ತಫಾನಿಗೆ ನೀಡುತ್ತಿದ್ದರು. ನಂತರ ಅಕ್ಬರ್ ಅಲಿ ಹೇಳಿದಂತೆ ಸಿಮ್ ಕಾರ್ಡ್ ಮಹಮ್ಮದ್ ಮುಸ್ತಫಾ ಪಡೆದುಕೊಂಡು ಬೆಂಗಳೂರು ವ್ಯಕ್ತಿಗಳಿಗೆ ಖಾಸಗಿ ಬಸ್ ಮೂಲಕ ಕಳುಹಿಸುವ ಕೆಲಸ ಮಾಡುತ್ತಿದ್ದ ಎಂಬ ವಿಚಾರ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

LEAVE A REPLY

Please enter your comment!
Please enter your name here