ಬೆಳ್ತಂಗಡಿ: ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ದಾರುನ್ನೂರ್ ಸಮನ್ವಯ ಶಿಕ್ಷಣ ಸಂಸ್ಥೆಗೆ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕೇಂದ್ರ ಮುಶಾವರ ಅಧ್ಯಕ್ಷ ಸಯ್ಯಿದ್ ಜಿಫ್ರಿ ಮುತ್ತು ಕೋಯಾ ತಂಙಳ್ ಭೇಟಿ ನೀಡಿದರು.
ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೊಯ ತಂಙಳ್ ಅವರು ಸಂಸ್ಥೆಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಅನಿವಾರ್ಯತೆ ಹಾಗೂ ಅಹ್ಲು ಸುನ್ನದ ಮೂಲಕ ಸನ್ನಡತೆಯನ್ನು ಅಳವಡಿಸುವಂತೆ ಕರೆನೀಡಿ ದುಆ ನೆರವೇರಿಸಿದರು.ಈ ವೇಳೆ ಅವರಿಗೆಸಂಸ್ಥೆಯ ವತಿಯಿಂದ ಗೌರವಾರ್ಪಣೆ ನೀಡಲಾಯಿತು.
ಈ ಸಂದರ್ಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಸದಸ್ಯ, ದ.ಕ.ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಫಕೀರಬ್ಬ ಮರೋಡಿ, ಅಬೂಬಕ್ಕರ್ ಮರೋಡಿ, ಪ್ರಾಂಶುಪಾಲ ಅಮೀನ್ ಹುದವಿ, ಸದರುಲ್ ಮುದರ್ರಿಸ್ ಹುಸೈನ್ ರಹ್ಮಾನಿ, ಉಪಪ್ರಾಂಶುಪಾಲ ಮುಈನುದ್ದೀನ್ ಹುದವಿ, ಎಸ್ ಕೆ ಎಸ್ ಎಫ್ ಕೇಂದ್ರೀಯ ಸಮಿತಿಯ ಇಸ್ಮಾಯಿಲ್ ಯಮಾನಿ, ಮೂಡಬಿದ್ರೆ ಕೇಂದ್ರ ಮಸೀದಿಯ ಖತೀಬ್ ಅಬೂಬಕ್ಕರ್ ಸಿದ್ದೀಕ್ ದಾರಿಮಿ, ಶಿಹಾಬ್ ಕಾಶಿಪಟ್ಣ, ಸಂಸ್ಥೆಯ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.