ಬೆಳ್ತಂಗಡಿ: ಸೌಜನ್ಯ ರೇಪ್ ಮರ್ಡರ್ ಕೇಸ್ ನಲ್ಲಿ ಆಕೆಯ ಮಾವ ವಿಠಲಗೌಡನೇ ಆರೋಪಿಯೆಂದು ಸೆ.8ರಂದು ಬೆಳ್ತಂಗಡಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ ಸ್ನೇಹಮಯಿ ಕೃಷ್ಣರವರು, ನಂತರ ಮಂಗಳೂರಿಗೆ ತೆರಳಿ ದ.ಕ. ಎಸ್.ಪಿ.ಗೆ ದೂರು ನೀಡಿದ್ದು, ಈ ದೂರರ್ಜಿಯನ್ನು ಧರ್ಮಸ್ಥಳ ಠಾಣೆಗೆ ಕಳುಹಿಸಲಾಗಿದೆ.
ಈ ಬಗ್ಗೆ ಎಸ್. ಪಿ. ಕಚೇರಿಯಿಂದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು ಅದರಂತೆ ” ದಿನಾಂಕ 08-09-2025ರಂದು ಸ್ನೇಹಮಯಿ ಕೃಷ್ಣನ್ ಎಂಬವರು ಸೌಜನ್ಯ ಪ್ರಕರಣದ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧಿಕ್ಷಕರಿಗೆ ದೂರು ನೀಡಿದ್ದಾರೆ.
ಸದ್ರಿ ದೂರು ಅರ್ಜಿಯನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಇದರ ಬಗ್ಗೆ ಪರಿಶೀಲನೆಯ ನಂತರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.