ಆದಿದ್ರಾವಿಡ ಸಮಾಜ ಸೇವಾ ಸಂಘದಿಂದ ಮಕ್ಕಳಿಗೆ ಶಿಕ್ಷಣ- ಉದ್ಯೋಗದ ಕುರಿತು ಮಾಹಿತಿ ಶಿಬಿರ

0

ಕುಕ್ಕಳ: ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು, ಕುಕ್ಕಳ ಗ್ರಾಮ ಸಮಿತಿಯ ಆಯೋಜನೆಯಲ್ಲಿ ಜ.28ರಂದು ಬಸವನಗುಡಿ ಧರ್ಮ ಚಾವಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾಹಿತಿ ಶಿಬಿರ ನಡೆಯಿತು.

ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಅರ್ಬಿಗುಡ್ಡೆ ಶಿಬಿರವನ್ನು ಉದ್ಘಾಟಿಸಿದರು.ಬಳಿಕ ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಕ ಸುಕೇಶ್ ಕೆ‌ ಹಾಗೂ ಪತ್ರಕರ್ತೆ ಕುಮಾರಿ ಯೋಗಿನಿ ಮಚ್ಚಿನ ಇವರು ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಉದ್ಯೋಗದ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ  ಆದಿ ದ್ರಾವಿಡ ಸಮಾಜ ಸೇವ ಸಂಘದ  ಕುಕ್ಕಳ ಗ್ರಾಮ‌ ಸಮಿತಿಯ ಅಧ್ಯಕ್ಷ ಆನಂದ ಹಟತೋಡಿ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷ ದಿನೇಶ್  ಕೆ  ಕೊಕ್ಕಡ, ಕುಕ್ಕಳ ಗ್ರಾಮ‌ ಸಮಿತಿಯ ಕಾರ್ಯದರ್ಶಿ ಕುಮಾರಿ ರಂಜಿನಿ ಮಂಜಲ್ಪಲ್ಕೆ, ಉಪಕಾರ್ಯದರ್ಶಿ ಆನಂದ ಬೆರ್ಕಳ, ಗೌರವಾಧ್ಯಕ್ಷ ರಾಮ.ಕೆ, ಗಿರಿಯಪ್ಪ, ತುಕ್ರಪ್ಪ ಬೆರ್ಕಳ ಇವರುಗಳು ಉಪಸ್ಥಿತರಿದ್ದರು.

20 ಕ್ಕೂ ಹೆಚ್ಚು ಮಕ್ಕಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು‌.ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಸಮಿತಿಯ  ಜೊತೆ ಕಾರ್ಯದರ್ಶಿ ಶಿವಕುಮಾರ್ ಸ್ವಾಗತಿಸಿ,  ಕುಕ್ಕಳ ಗ್ರಾಮ ಸಮಿತಿಯ ಕೋಶಾಧಿಕಾರಿ ನವೀನ್  ನಿರೂಪಿಸಿ, ಧನ್ಯವಾದವಿತ್ತರು.

p>

LEAVE A REPLY

Please enter your comment!
Please enter your name here