

ಬೆಳ್ತಂಗಡಿ: ಚರ್ಚ್ ರೋಡ್ ಅಲ್ಲಾಟಬೈಲು ಕೈಪ್ಲೋಡಿ ನಿವಾಸಿ ಬೆಳ್ಳಿ ಆಭರಣಗಳ ತಯಾರಕ ಪ್ರವೀಣ್ ಆಚಾರ್ಯ (42ವ) ಅಧಿಕ ರಕ್ತದೊತ್ತಡದಿಂದ ಇಂದು(ಜ.30) ಸಂಜೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರವೀಣ್ ಆಚಾರ್ಯರವರು ಬೆಳ್ತಂಗಡಿ ಬಸ್ ಸ್ಟಾಂಡ್ ಬಳಿಯಿರುವ ಅಂಗಡಿಯೊಂದರಲ್ಲಿ ಬೆಳ್ಳಿ ತಯಾರಿಸುವ ಕೆಲಸ ಮಾಡುತ್ತಿದ್ದರು.
ಇಂದು ಬೆಳಿಗ್ಗೆ ಬಿಪಿ ಹೆಚ್ಚಾಗಿ ಬಚ್ಚಲು ಮನೆಯಲ್ಲಿ ಬಿದ್ದಿದ್ದು ತಕ್ಷಣ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ತಾಯಿ, ಸಹೋದರಿಯರು, ಕುಟುಂಬ ವರ್ಗವನ್ನು ಅಗಲಿದ್ದಾರೆ.