ಪಾಂಡವರಕಲ್ಲು: ಮಡವು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆಯು ಜ.16ರಂದು ನಡೆಯಿತು.
ಬೆಳಿಗ್ಗೆ 7.30ಕ್ಕೆ ದೇವರ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, 8 ರಿಂದ ಪುಣ್ಯಾಹವಾಚನ, ಗಣಹೋಮ, ಕಲಶಾರಾಧನೆ, ಪ್ರಧಾನ ಹೋಮ, ಪಂಚಾಮೃತ ಅಭಿಷೇಕ, ಕಲಶಾಭಿಷೇಕ, ಬೆಳಿಗ್ಗೆ 9.45ಕ್ಕೆ ಅನಂತೇಶ್ವರ ಭಗಿನಿ ಭಜನಾ ಮಂಡಳಿ ಬಳ್ಳಮಂಜ ಇವರಿಂದ ಭಜನಾ ಸಂಕೀರ್ತನೆ, 10ಕ್ಕೆ ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ, 10.30ಕ್ಕೆ ತುಲಾಭಾರ ಸೇವೆ, 11.00ಕ್ಕೆ ಮಹಾ ಪೂಜೆ, ಮಧ್ಯಾಹ್ನ 12.00ರಿಂದ ಶ್ರೀ ದೇವರ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು, ತಂತ್ರಿವರ್ಯರು, ಅರ್ಚಕ ವೃಂದ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು, ಸದಸ್ಯರು, ಬಾಲಸುಬ್ರಹ್ಮಣ್ಯ ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು, ಶ್ರೀ ದುರ್ಗಾ ಮಹಿಳಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಊರ ಗಣ್ಯರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಪ್ರಸಾದ ಸ್ವೀಕರಿಸಿದರು.
ಸಂಜೆ 4.00ಕ್ಕೆ ದೈವಗಳಿಗೆ ಪರ್ವ, ರಾತ್ರಿ ಗಂಟೆ 7.00ಕ್ಕೆ ಶ್ರೀ ದುರ್ಗಾ ಪೂಜೆ, ರಾತ್ರಿ ಗಂಟೆ 7.30ಕ್ಕೆ ಕಿನ್ನಿದಾರು ಬಿಲ್ಲವ ಮಹಿಳಾ ಭಜನಾ ಮಂಡಳಿ, ಕುತ್ತಿಲ ಇವರಿಂದ ಭಜನಾ ಸಂಕೀರ್ತನೆ, ರಾತ್ರಿ ಗಂಟೆ 8.30ಕ್ಕೆ ಶ್ರೀ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 9.30ಕ್ಕೆ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾತ್ರಿ ಗಂಟೆ 9.30ಕ್ಕೆ ಪಂಜುರ್ಲಿ ದೈವದ ಗಗ್ಗರ ಸೇವೆ ನಡೆಯಲಿದೆ.ಜ.17 ರಂದು ಬೆಳಿಗ್ಗೆ ಗಂಟೆ 8.00ಕ್ಕೆ ಸಂಪ್ರೋಕ್ಷಣೆ, ಮಂತ್ರಾಕ್ಷತೆ ನಡೆಯಲಿದೆ.