



ಬೆಳ್ತಂಗಡಿ: ಮಗ ಆತ್ಮಹತ್ಯೆ ಮಾಡಿಕೊಂಡ 13 ದಿನಕ್ಕೆ ತಂದೆ ಕೂಡ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಪೆರ್ಲದಲ್ಲಿ ಜ.16 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪೆರ್ಲ ನಿವಾಸಿ ಯೋಗೀಶ್ ಪೂಜಾರಿ ಮಗ ಯಶ್ಚಿತ್ (14) ಜ.4 ರಂದು ಕ್ಷುಲಕ ವಿಚಾರದಲ್ಲಿ ಮನೆಯೊಳಗಿನ ಅಡ್ಡಕ್ಕೆ ತಾಯಿಯ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.ಜ.14 ರಂದು ಯಕ್ಷಿತ್ ಉತ್ತರಕ್ರಿಯೆ ನಡೆದಿದ್ದು.ಇದರ ಬೆನ್ನಲ್ಲೆ ಜ.16 ರಂದು(ಇಂದು) ಮನೆಯಲ್ಲಿ ತಂದೆ ಯೋಗೀಶ್ ಪೂಜಾರಿ(41) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೂಲಗಳ ಪ್ರಕಾರ ತಂದೆ ಯೋಗೀಶ್ ಪೂಜಾರಿ ಮಗನ ಆತ್ಮಹತ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣ.


            





