ಕಳಂಜ ಗ್ರಾ.ಪಂ ನಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಕಾರ್ಯತಡ್ಕ: ಗ್ರಾಮ ಪಂಚಾಯತ್ ಕಳಂಜ ಸಹಭಾಗಿತ್ವದಲ್ಲಿ ನ್ಯೂ ವಿಶನ್ ಕಾರ್ಯಕ್ರಮದಡಿಯಲ್ಲಿ 2.5 ಎನ್ ವಿ ಜಿ ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ಕಳಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಣ್ಣಿನ ಉಚಿತ ತಪಾಸನಾ ಶಿಬಿರ ಜ.12 ರಂದು ನಡೆಯಿತು.

ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಾರಿಜ, ನಿಕಟಪೂರ್ವ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷ ಮಂಜುನಾಥ ಗೌಡ ಹಾರಿತ್ತಕಜೆ, ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಧನಂಜಯ ಗೌಡ, ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕುಲಾಡಿ, ಡಾ.ಪ್ರೇಮಚಂದ್ರ ಮತ್ತು ವೈದ್ಯರುಗಳು, ಗ್ರಾಮ ಪಂಚಾಯತ್ ಕಾರ್ಯದರ್ಶಿ ಹೊನ್ನಪ್ಪ ಗೌಡ ಮತ್ತು ಸಿಬ್ಬಂದಿಗಳು ಹಾಜರಿದ್ದು ಸಹಕರಿಸಿದರು.

ಶಿಬಿರದಲ್ಲಿ ಕಣ್ಣಿನ ಕಂಪ್ಯೂಟರೀಕೃತ ತಪಾಸಣೆ, ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here